ನಂಜನಗೂಡು: ತಾಲೂಕಾದ್ಯಂತ ಹಿಂದುಳಿದ ವರ್ಗಗಳಲ್ಲಿ ಇಂದಿಗೂ ಬಾಲ್ಯ ವಿವಾಹ ಜೀವಂತವಾಗಿದ್ದು, ಅದನ್ನು ಧಿಕ್ಕರಿಸಿ ಈ ಪೋರಿ ಮನೆಯಿಂದಲೇ ಹೊರಬಂದು ಸ್ವಾವಲಂಬಿಯಾಗಲು ಮುಂದಾಗಿದ್ದಾಳೆ. ಸಮಾಜದ ಬಾಲ್ಯವಿವಾಹದ ವಿರುದ್ಧ ಸಿಡಿದು ನಿಂತ ಈ ಕುವರಿಯ ಹೆಸರು ಸುಮಾ(16).
ತಾಲೂಕಿನ ಮಾದೇವ ಶೆಟ್ಟಿ ಹಾಗೂ ಮಂಗಳಮ್ಮನವರ ಪುತ್ರಿ ಹದಿನಾರರ ಹರಿಯದ ಅಪ್ರಾಪ್ತೆ. ಈಕೆಯನ್ನು ಇದೇ ತಾಲೂಕಿನ ಹಗಿನವಾಳು ಗ್ರಾಮದಲ್ಲಿರುವ ಸೋದರ ಮಾವ ತಾಯಿಯ ತಮ್ಮನಿಗೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದು, ಚಿಕ್ಕವಯಸ್ಸಿನಲ್ಲೆ ಮದುವೇ ಬೇಡ ಎಂದಾಗ ಪಾಲಕರು ಜೀವ ಬೆದರಿಕೆ ಹಾಕಿದ್ದಾರೆ.
ಬೇರೆ ದಿಕ್ಕು ಕಾಣದು ಈ ಬಾಲಕಿ ಸೋಮವಾರ ಮನೆಯಿಂದ ಹೊರ ಬಂದಿದ್ದಾಳೆ. ನಂಜನಗೂಡಿನತ್ತ ಧಾವಿಸಿ ಬಂದು ರಾತ್ರಿಯಲ್ಲಿ ಶ್ರೀಕಂಠೇಶರ ದೇವಾಯದ ಆವರಣದಲ್ಲಿ ರಕ್ಷಣೆ ಪಡೆದು ನಂತರ ಅವರಿವರನ್ನು ಕೇಳಿ ನೇರವಾಗಿ ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಮಹಿಳಾ ಹಾಗೂ ಮಕ್ಕಳ ಇಳಾಖೆಯ ಸಾಂತ್ವಾನ ಕೇಂದ್ರ ತಲುಪಿ ವಿಷಯ ತಿಳಿಸಿದ್ದಾಳೆ.
ವಿವರ ಕಲೆಹಾಕಿದ ಅಧಿಕಾರಿ ಸಾವಿತ್ರಿ ಈಕೆಗೆ ಧೈರ್ಯ ಹೇಳಿ ನಿಜವಾಗಿ ಧೈರ್ಯ ತುಂಬಿ. ಊಟೋಪಾಚಾರ ನೀಡಿದರು. ಮತೆ ಮನೆಗೆ ತೆರಳಿದರೆ ಜೀವ ಭಯ ಎಂದು ಬಾಲಕಿಯನ್ನು ನಂತರ ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಿ ಅವಳನ್ನು ರಕ್ಷಿಸಲಾಗುವದು ಎಂದು ಸಾವಿತ್ರಿ ತಿಳಿಸಿದರು.
ಬಾಲ್ಯವಿವಾಹ ರದ್ದು: ಟಿ ನರಸಿಪುರದ ರೇಣುಕಾ ಭವನ ಖಾಸಗಿ ಕಲ್ಯಾಣ ಮಂಟಪದಲ್ಲಿ ಇದೇ ತಿಂಗಳು 23 ರಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ನಂಜನಗೂಡಿನ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಗೀತಾ ಲಕ್ಷ್ಮೀ ಹಾಗೂ ಸಾವಿತ್ರಿ ಸ್ಥಗಿತಗೊಳಸಿದ ಘಟನೆ ವರದಿಯಾಗಿದೆ.
ದಾಸನೂರಿನ ಅಪ್ರಾಪ್ತ ಬಾಲಕಿಯ ಮದುವೆ ನರಸಿಪುರದ ಕಲ್ಯಾಣ ಮಂಟಪದಲ್ಲಿ ನ.23 ರಂದು ನಡೆಯವದರ ಖಚಿತ ಮಾಹಿತಿ ಕಲೆ ಹಾಕಿದ ಈ ಅಧಿಕಾರಿಗಳು ತಕ್ಷಣ ಕಾರ್ಯ ತತ್ಪರರಾಗಿ ಬಾಲಕಿಯ ತಂದೆ ತಾಯಿ ಹಾಗೂ ಗ್ರಾಮ ಹಿರಿಯರನ್ನು ಕರೆಸಿ ತಿಳಿವಳಿಕೆ ನೀಡಿ ಮದುವೆಯನ್ನು ಮುಂದೂಡಿಸುವಲ್ಲಿ ಸಾಫಲ್ಯತೆ ತೋರಿದ್ದರಿಂದಾಗಿ ಒಂದು ಬಾಲ್ಯವಿವಾಹ ತಪ್ಪಿಸಿದಂತಾಗಿದೆ.