Advertisement

ವಿಕ್ರಮ್ ರವಿಚಂದ್ರನ್ ಮಾಸ್ ಎಂಟ್ರಿ: ‘ತ್ರಿವಿಕ್ರಮ’ಟೀಸರ್ ರಿಲೀಸ್

01:45 PM Aug 16, 2020 | Mithun PG |

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ  ‘ತ್ರಿವಿಕ್ರಮ’ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಇದರಲ್ಲಿ ವಿಕ್ರಮ್ ಮಾಸ್ ಅವತಾರದಲ್ಲಿ ಮಿಂಚಿದ್ದು ಸಿನಿಮಾದ ಕುರಿತು ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

ಇತ್ತೀಚೆಗಷ್ಟೇ ಆಡಿಯೋ ಹಕ್ಕುಗಳ ಮಾರಾಟದ ಮೂಲಕ ತ್ರಿವಿಕ್ರಮ  ಚಿತ್ರ ಭಾರೀ ಸದ್ದು ಮಾಡಿತ್ತು. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣವೂ ಮುಗಿದಿದೆ.

ಇಂದು ವಿಕ್ರಮ್ ರವಿಚಂದ್ರನ್ ಅವರ ಹುಟ್ಟುಹಬ್ಬವಾದ್ದರಿಂದ ಚಿತ್ರತಂಡ ಟೀಸರ್ ಮೂಲಕ ಸರ್ಪ್ರೈಸ್ ನೀಡಿದೆ. 1 ನಿಮಿಷ 26 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಯಾವುದೇ ಡೈಲಾಗ್ ಇಲ್ಲ. ಬದಲಾಗಿ ರಾಜಸ್ತಾನದ ಒಂಟೆ ರೇಸಿಂಗ್​, ಬೈಕ್​ನ ಗಾಲಿಗೆ ಬೆಂಕಿ ಹೊತ್ತಿಸಿ, ಅದರಲ್ಲಿ ವೀಲಿಂಗ್​ ಮಾಡುವ ಭಂಗಿಯಲ್ಲಿ ವಿಕ್ರಮ್​ ಮಾಸ್​ ಹೀರೋ ಲುಕ್​ನಲ್ಲಿ ಮಿಂಚಿದ್ದಾರೆ.

ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಒಟ್ಟು 6 ಹಾಡುಗಳು ಮೂಡಿಬಂದಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಹರಿಚರಣ್, ಶ್ರೇಯಾ ಘೋಶಾಲ್, ಸಿದ್ ಶ್ರೀರಾಮ್ ಮುಂತಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಇನ್ನು ಚಿತ್ರವನ್ನು ಸೋಮಣ್ಣ ನಿರ್ಮಾಣ ಮಾಡಿದ್ದು, ಸಹನಾ ಮೂರ್ತಿ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ತ್ರಿವಿಕ್ರಮ ಸಿನಿಮಾದ ಹಾಡುಗಳ ಹಕ್ಕುಗಳು 50 ಲಕ್ಷಕ್ಕೆ ಮಾರಾಟವಾಗಿದ್ದವು. ಎ2 ಮ್ಯೂಸಿಕ್ ಸಂಸ್ಥೆ ಈ ಹಕ್ಕುಗಳನ್ನು ಪಡೆದುಕೊಂಡಿತ್ತು, ಇದೀಗ ಅದೇ ಯೂಟ್ಯೂಬ್​ ಚಾನೆಲ್​ನಲ್ಲಿ ಟೀಸರ್ ರಿಲೀಸ್ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next