Advertisement

ಥ್ರಿಲ್ಲರ್ ವೇಗದೂತ

11:28 AM Sep 11, 2018 | |

ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಸ್ಟಾರ್‌ ನಟರುಗಳು ಬಂದು ಕ್ಲಾಪ್‌ ಮಾಡುವುದು, ಕ್ಯಾಮೆರಾಗೆ ಚಾಲನೆ ಕೊಡುವುದು ಸಹಜ. ಅಂಥದ್ದೇ ಒಂದು ಹೊಸ ತಂಡದ ಚಿತ್ರಕ್ಕೆ ನಟ ಯೋಗಿ ಸಾಥ್‌ ನೀಡಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಹೌದು, “ವೇಗದೂತ’ ಎಂಬ ಚಿತ್ರದ ಮುಹೂರ್ತ ಕತ್ರಿಗುಪ್ಪೆಯಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಲೂಸ್‌ ಮಾದ ಯೋಗಿ ಕ್ಲಾಪ್‌ ಮಾಡಿದರೆ, ಸೇನಾ ಅಧಿಕಾರಿ ತಾರೇಶ್‌ ಕ್ಯಾಮರಾ ಚಾಲನೆ ಮಾಡಿದರು.

Advertisement

“ವೇಗದೂತ’ ಚಿತ್ರಕ್ಕೆ ಪ್ರದೀಪ್‌ ಚಂದ್ರ ನಿರ್ದೇಶಕರು. ಈ ಹಿಂದೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪ್ರದೀಪ್‌ ಚಂದ್ರ ಅವರಿಗೆ ಇದು ಮೊದಲ ಸಿನಿಮಾ. ಇದೊಂದು ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ಕಥೆ. ಮೊದಲರ್ಧ ಗ್ರಾಮೀಣ ಪ್ರದೇಶ ಉಳಿದದ್ದು ನಗರದಲ್ಲಿ ಚಿತ್ರೀಕರಣ ನಡೆಯಲಿದೆ. ಬಹುತೇಕ ರಾತ್ರಿ ವೇಳೆಯಲ್ಲಿ ಕಥೆ ಸಾಗಲಿದೆ. ಚಿತ್ರದಲ್ಲಿ ಸ್ಮಗ್ಲಿಂಗ್‌, ಸೆಂಟಿಮೆಂಟ್‌, ಪೋಲಿಸ್‌ ಫ್ಯಾಮಿಲಿ, ಲವ್‌ ಅಂಶಗಳೂ ಇಲ್ಲಿವೆ.

ಬಹುತೇಕ ಬೆಂಗಳೂರು ಮತ್ತು ಹಾಸನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಶ್ರೀನಿವಾಸ್‌ ಗೌಡ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಸಾಯಿ ಕಿರಣ್‌ ಸಂಗೀತವಿದೆ. ಉಮೇಶ್‌ ಛಾಯಾಗ್ರಹಣವಿದೆ. ಕಿಟ್ಟಪ್ಪ ಸಂಕಲನ ಮಾಡಿದರೆ, ಅಪ್ಪು ವೆಂಕಟೇಶ್‌ ಸಾಹಸವಿದೆ. ಸಂದೀಪ್‌, ಪ್ರದೀಪ್‌, ಅಂಜನ್‌, ಪೂಜಾರಿ, ಪ್ರಮೋದ್‌ಶೆಟ್ಟಿ, ಚೈತ್ರ, ರಾಜೇಶ್ವರಿ, ರೇಣು, ಗೌರವ್‌, ಲಿರಿನ್‌ ಕಾವೇರಪ್ಪ, ಮಂಜು ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.