Advertisement

ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ

03:25 PM Feb 09, 2021 | Team Udayavani |

ಚಿಕ್ಕಮಗಳೂರು: ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಜಿಪಂ ಉಪಾಧ್ಯಕ್ಷ ಸೋಮಶೇಖರ್‌ ಹೇಳಿದರು.

Advertisement

ಸೋಮವಾರ ನಗರದ ಜಿಪಂ ಆವರಣದಲ್ಲಿ 2019-20ನೇ ಸಾಲಿನ ಜಿಪಂ ವತಿಯಿಂದ ವಿಕಲ ಚೇತನರಿಗೆ ಸಾಂಕೇತಿಕವಾಗಿ ಮೂರು ಚಕ್ರದ ವಾಹನ ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂಗವಿಕಲರ ಅನುದಾನದಡಿ ಕಳೆದ ಬಾರಿ 29 ವಾಹನಗಳನ್ನು ನೀಡಿದ್ದು, ಈ ಬಾರಿ 28 ವಾಹನಗಳನ್ನು ವಿತರಣೆ ಮಾಡಲಾಗಿದೆ. ಇದರ ಸದುಪಯೋಗವನ್ನು ಫಲಾನುಭವಿಗಳೇ ಪಡೆದುಕೊಳ್ಳಬೇಕು. ಅವರಿಗೂ ಸಹ ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಬೇಕು ಎಂದರು.

ಇದನ್ನೂ ಓದಿ:ರೈತರ ಒಕ್ಕಲೆಬ್ಬಿಸುವ ಕಾಯ್ದೆ ತಂದಿದ್ದು ಬಿಜೆಪಿ: ಹೆಗ್ಡೆ

ಜಿಪಂ ಸದಸ್ಯೆ ಕವಿತ ಲಿಂಗರಾಜು ಮಾತನಾಡಿ, ಅಂಗವಿಕಲರ ಮೇಲೆ ನಮಗೆ ಕರುಣೆ ಇರಬಾರದು. ಬದಲಾಗಿ ನಾವು ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕೆಂಬ ದೃಷ್ಟಿಯಲ್ಲಿ ವಾಹನಗಳನ್ನು ನೀಡಿದ್ದೇವೆ ಎಂದು ಹೇಳಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಸ್‌. ಪೂವಿತಾ ಹಾಗೂ ಜಿಪಂ ಸದಸ್ಯರಾದ ಜಸಂತಾ ಅನಿಲ್‌ ಕುಮಾರ್‌, ರವೀಂದ್ರ ಬೆಳವಾಡಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next