ಕುಪ್ವಾರಾ: ಭಾರತ-ಪಾಕ್ ಗಡಿ ಭಾಗದಲ್ಲಿರುವ ಕುಪ್ವಾರಾ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಿಗೆ 70 ವರ್ಷಗಳ ನಂತರ ಈಗ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಹಿಮಚ್ಛಾದಿತ ಪ್ರದೇಶದಲ್ಲಿರುವ ಆ ಹಳ್ಳಿಗಳವರೆಗೆ ನೂರಾರು ಕಿ.ಮೀ.ಗಳವರೆಗೆ ವಿದ್ಯುತ್ ಲೈನ್‌ಗಳನ್ನು ಎಳೆದು, ಅಲ್ಲಿನ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕಕಲ್ಪಿಸಲಾಗಿದೆ.
ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಆ ಹಳ್ಳಿಗಳು ಇಂದು ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಂಡಿವೆ ಎಂದು ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ:LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು
“ನಾನು ಇಲ್ಲಿನ ಡಿಸಿಯಾಗಿ ಬಂದ ನಂತರ, ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಹಳ್ಳಿಗಳ ಸಮಸ್ಯೆಯನ್ನು ಆಲಿಸುವ ಅವಕಾಶ ಸಿಕ್ಕಿತು. ಪ್ರತಿ ಬಾರಿಯ ಚುನಾವಣೆಯಲ್ಲಿ ಇವರ ಪ್ರಾಂತ್ಯಗಳಲ್ಲಿ ಶೇ.60 ಮತದಾನವಾಗುತ್ತದೆ. ಆದರೂ, ಇವರ ಸಮಸ್ಯೆಯನ್ನು ಯಾರೂ ಆಲಿಸಿಲ್ಲ. ನಾನು ಇಲ್ಲಿನ ಜನರೊಂದಿಗೆ ಭೇಟಿ ನೀಡಿದಾಗ ಅವರು ನಮಗೆ ವಿದ್ಯುತ್ ಎಂದಿಗೆ ಬರುತ್ತದೆ ಎಂದು ಕೇಳಿದ್ದರು. ಅದಕ್ಕೆ ಸ್ಪಂದಿಸಿ ತಕ್ಷಣ ಕಾರ್ಯಪ್ರವೃತ್ತನಾದೆ. ಆ ಪ್ರಯತ್ನದ ಫಲವಾಗಿ, ಈ ಹಳ್ಳಿಗರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ” ಎಂದು ದಿಲ್ಲಿ ಐಐಟಿಯ ಮಾಜಿ ವಿದ್ಯಾರ್ಥಿ ಗಾರ್ಗ್ ತಿಳಿಸಿದ್ದಾರೆ.