Advertisement

ಒಂದೇ ದಿನದಲ್ಲಿ ಹಳಿತಪ್ಪಿದ ಮೂರು ರೈಲುಗಳು

07:45 AM Sep 08, 2017 | Harsha Rao |

ಹೊಸದಿಲ್ಲಿ: ನಿರಂತರ ರೈಲು ದುರಂತಗಳು ನಡೆದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರನ್ನೇ ಬದಲಾಯಿಸಲಾಯಿತಾದರೂ ಅಪಘಾತಗಳು ತಪ್ಪುತ್ತಿಲ್ಲ. ಇದಕ್ಕೆ ಸ್ಪಷ್ಟ ಸಾಕ್ಷ್ಯವೆಂಬಂತೆ, ಗುರುವಾರ ಒಂದೇ ದಿನ ಮೂರು ರೈಲು ಅವಘಡಗಳು ಸಂಭವಿಸಿವೆ.

Advertisement

ದಿಲ್ಲಿ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಮೂರು ರೈಲುಗಳು ಹಳಿ ತಪ್ಪಿವೆ. ಆದರೆ, ಒಬ್ಬ ಪ್ರಯಾಣಿಕನಿಗೆ ಗಾಯವಾಗಿದ್ದು ಬಿಟ್ಟರೆ, ಹೆಚ್ಚಿನ ಅನಾಹುತ ಆಗಿಲ್ಲ. ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ 2 ಬೋಗಿಗಳು ಹಳಿ ತಪ್ಪಿದರೆ, ಉತ್ತರಪ್ರದೇಶದಲ್ಲಿ ಶಕ್ತಿಪುಂಜ್‌ ಎಕ್ಸ್‌ಪ್ರೆಸ್‌ನ 7 ಬೋಗಿಗಳು ಹಳಿ ತಪ್ಪಿವೆ. ಇನ್ನೊಂದೆಡೆ, ಸಂಜೆ ವೇಳೆಗೆ ಮಹಾರಾಷ್ಟ್ರದ ಖಂಡಾಲಾದಲ್ಲಿ ಸರಕು ಸಾಗಣೆ ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ಒಂದೇ ದಿನ ಮೂರು ಅಪಘಾತ ನಡೆದಂತಾಗಿದೆ.  ನೂತನ ರೈಲ್ವೆ ಸಚಿವರಾಗಿ ಪಿಯೂಷ್‌ ಗೋಯಲ್‌ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲನೇ ಅವಘಡ ಇದಾಗಿದೆ. ಕಳೆದ ತಿಂಗಳು ಪದೇ ಪದೆ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರಾಗಿದ್ದ ಸುರೇಶ್‌ ಪ್ರಭು ರಾಜೀನಾಮೆಗೆ ಮುಂದಾಗಿದ್ದರು. ಸಂಪುಟ ಪುನಾರಚನೆ ವೇಳೆ ಅವರ ಖಾತೆ ಬದಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next