Advertisement

ಸಮುದ್ರದಲ್ಲಿ ಈಜುತ್ತಿದ್ದ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವು

01:32 PM Mar 19, 2019 | udayavani editorial |

ಕಡಲೂರು : ಸಮುದ್ರದಲ್ಲಿ ಈಜುತ್ತಿದ್ದ  ಮೂವರು ವಿದ್ಯಾರ್ಥಿಗಳು ಇಂದು ಮಂಗಳವಾರ ಮುಳುಗಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. 

Advertisement

17ರಿಂದ 19 ವರ್ಷದ ಪ್ರಾಯದ ಮೂವರು ವಿದ್ಯಾರ್ಥಿಗಳು ಇಂದು ಮಂಗಳವಾರ ಮಧ್ಯಾಹ್ನ ಈಜಲೆಂದು ಸಮುದ್ರಕ್ಕೆ ಇಳಿದಿದ್ದರು. ಅವರು ಈಜುತ್ತಿದ್ದಂತೆ ಭಾರೀ ಗಾತ್ರದ ಅಲೆ ಅವರನ್ನು ಅಪ್ಪಳಿಸಿ ಆಳ ಸಮುದ್ರದೆಡೆಗೆ ಅವರನ್ನು ಸೆಳೆದೊಯ್ದಿತು.

ಕೆಲವು ತಾಸುಗಳ ಬಳಿಕ ವಿದ್ಯಾರ್ಥಿಗಳ ಮೃತ ದೇಹ ಸಮುದ್ರ ಕಿನಾರೆಗೆ ತೇಲಿ ಬಂತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next