ಧಾರವಾಡ: ಸತ್ತೂರಿನ ಎಸ್‌ಡಿಎಂ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ರಾಜೀವ ಗಾಂಧಿ ವಿಶ್ವವಿದ್ಯಾಲಯದ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಳ್ಳಿ ಹಬ್ಬದ ಸಂಭ್ರಮಾ ಚರಣೆಯಲ್ಲಿರುವ ರಾಜೀವ ಗಾಂಧಿ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಪುರಸ್ಕರಿಸುವುದಕ್ಕಾಗಿ ಕಲೆ, ಸಾಹಿತ್ಯ, ಸಂಗೀತ ಮತ್ತು ಕ್ರೀಡೆಗಳಲ್ಲಿ ಸಾಧನೆಗೈದವರಿಗೆ ಜೂ. 14ರಂದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ.
ಪುರಸ್ಕಾರ ಪಡೆದ ವಿದ್ಯಾರ್ಥಿಗಳಲ್ಲಿ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಡಾ| ಶಿವಾನಿ ಪೃಥ್ವಿ ಅವರು ಕ್ರೀಡಾ ಖೋಟಾದಡಿ ಏಷ್ಯಾ ಆಟೋಜಿಮ್ಕಾನ ಚಾಂಪಿಯನ್‌ಶಿಪ್, ಇಂಡೋನೇಷಿಯಾದಲ್ಲಿ ಆಟೋರೇಸರ್ ಆಗಿ ಮಾಡಿದ ಸಾಧನೆಗೆ ರಾಜ್ಯದ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ| ಸುಧಾಕರ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಎಸ್‌ಡಿಎಂ ದಂತ ಮಹಾವಿದ್ಯಾಲಯದ ಉಜ್ಜ ಪಾಂಡೆ ಅವರು ಮಂಡಿಸಿದ ಮೂರು ಅಂತಾರಾಷ್ಟ್ರೀಯ ಪ್ರಬಂಧಗಳಿಗಾಗಿಯೂ ಹಾಗೂ ಎಸ್‌ಡಿಎಂ ಫಿಜಿಯೋ ಥೆರಪಿ ಕಾಲೇಜಿನ ದೇವತಾ ಉದಯ ನಾಯ್ಕ ಅವರು ಡ್ನೂಬಾಲ್ ಚಾಂಪಿಯನ್‌ಶಿಪ್ ಮಹಿಳಾ ತಂಡದ ಉಪನಾಯಕಿಯಾಗಿ ಚಿನ್ನದ ಪದಕ ಗಳಿಸಿ ಮಾಡಿರುವ ಸಾಧನೆಗೆ ಪುರಸ್ಕಾರ ಬಂದಿದೆ.
ಈ ಮೂವರು ಸಾಧಕ ವಿದ್ಯಾರ್ಥಿಗಳಿಗೆ ತಲಾ 5000 ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರ ದೊರೆತಿದೆ.