Advertisement
ಖಾಸಗಿ ಸೆಕ್ಯುರಿಟಿ ಸಂಸ್ಥೆಗೆ ಸೇರಿದ ಮಂಜನಾಡಿ ನಿವಾಸಿ ಸಂತೋಷ್ (38), ಕೊಲ್ಯ ಕಾಸಿಂಬೆಟ್ಟು ನಿವಾಸಿ ಸೋಮನಾಥ (58) ಮತ್ತು ಕೋಟೆಕಾರು ಬ್ಯಾಂಕ್‌ನ ಖಾಯಂ ಸೆಕ್ಯುರಿಟಿ ಕೆ.ಸಿ.ರೋಡ್ ಕಾಲನಿ ನಿವಾಸಿ ಉಮೇಶ್ (60) ಮೃತ ಪಟ್ಟ ವರು. ಮಂಗಳವಾರ ಬೆಳಗ್ಗೆ ಬ್ಯಾಂಕ್‌ನ ಸಿಬಂದಿ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೋಟೆಕಾರು ಬ್ಯಾಂಕ್‌ನ ಕೆ.ಸಿ. ರೋಡ್ ಶಾಖೆಯಲ್ಲಿ ಸೋಮವಾರ ರಾತ್ರಿ ಎಂದಿನಂತೆ ಖಾಯಂ ಸೆಕ್ಯು ರಿಟಿ ಉಮೇಶ್, ಖಾಸಗಿ ಸೆಕ್ಯುರಿಟಿ ಏಜೆನ್ಸಿಯ ಸೋಮನಾಥ್ ಭದ್ರತಾ ಕಾರ್ಯಕ್ಕೆ ಆಗಮಿಸಿದ್ದರು. ಸೋಮ ನಾಥ್ ಪಾಳಿಗೆ ಬರುವ ಮಾಹಿತಿ ಇರದೆ ಏಜೆನ್ಸಿಯ ಇನ್ನೊಬ್ಬ ಸಿಬಂದಿ ಸಂತೋಷ್ ಕೂಡ ಭದ್ರತಾ ಕಾರ್ಯಕ್ಕೆ ಆಗಮಿಸಿದ್ದು, ಈ ಸಂದರ್ಭ ಮಳೆ ಸುರಿಯುತ್ತಿದ್ದ ಕಾರಣ ಸಂತೋಷ್ ಬ್ಯಾಂಕ್‌ನಲ್ಲೇ ಉಳಿದಿರಬಹುದು ಎನ್ನ ಲಾಗಿದೆ. ರಾತ್ರಿ ವಿದ್ಯುತ್ ಕೈಕೊಟ್ಟ ಕಾರಣ ಉಮೇಶ್ ಜನರೇಟರ್ ಸ್ಟಾರ್ಟ್ ಮಾಡಿ ಮಲಗಿ ನಿದ್ರಿಸಿದ್ದು, ಬ್ಯಾಂಕ್‌ನ ಎಲ್ಲ ಕಿಟಕಿಗಳ ಬಾಗಿಲನ್ನು ಹಾಕಿದ್ದ ರಿಂದ ಜನರೇಟರ್‌ನಿಂದ ಹೊರಗೆ ಬಂದ ವಿಷಪೂರಿತ ಹೊಗೆ ಹೊರ ಹೋಗದೆ ಮೂವರೂ ಉಸಿರು ಗಟ್ಟಿ ಮೃತಪಟ್ಟಿರಬಹುದು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಅಭಿ ಪ್ರಾಯ ಪಟ್ಟಿದ್ದಾರೆ. ಎರಡನೇ ದೊಡ್ಡ ದುರ್ಘಟನೆ
ಈ ಶಾಖೆಯಲ್ಲಿ ಇದು ಎರಡನೇ ದೊಡ್ಡ ದುರ್ಘಟನೆ. ಜೂ. 23ರಂದು ಹಾಡಹಗಲೇ ಬ್ಯಾಂಕ್‌ನ ಸಿಬಂದಿಗೆ ಚೂರಿ ತೋರಿಸಿ ಶೌಚಾ ಲಯದಲ್ಲಿ ಕೂಡಿ ಹಾಕಿ ಮೂರೂ ವರೆ ಕೋಟಿ ರೂ. ಮೌಲ್ಯದ ಚಿನ್ನಾ ಭರಣ ದರೋಡೆ ಯತ್ನ ನಡೆದಿತ್ತು. ಚಿನ್ನಾಭರಣವನ್ನು ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾಗುವ ಕೊನೆಯ ಕ್ಷಣದಲ್ಲಿ ಬ್ಯಾಂಕ್‌ನ ಸಿಬಂದಿಯ ಕಲ್ಲಿನೇಟಿಗೆ ತತ್ತರಿಸಿದ ದರೋಡೆ ಕೋರರು ಚಿನ್ನಾಭರಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಅನಂತರ ಇಲ್ಲಿ ರಾತ್ರಿ ಇಬ್ಬರು ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿತ್ತು.
Related Articles
ಕೆ.ಸಿ.ರೋಡ್‌ನಲ್ಲಿರುವ ಬ್ಯಾಂಕ್‌ನ ಶಾಖೆಯ ಸುತ್ತಮುತ್ತ ಪ್ಯಾಸೇಜ್ ಕೊರತೆಯಿಂದ ಹೊರಗಡೆ ಕುಳಿತರೆ ಮಳೆಗಾಲದಲ್ಲಿ ಒದ್ದೆಯಾಗುವ ಸ್ಥಿತಿ ಇದೆ. ಭದ್ರತೆಯ ದೃಷ್ಟಿಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಬ್ಯಾಂಕ್‌ನ ಒಳಗಿನಿಂದ ಬೀಗ ಹಾಕಿ ಒಳಗೇ ಕರ್ತವ್ಯ ನಿರ್ವಹಿಸಲು ವ್ಯವಸ್ಥೆ ಮಾಡಿತ್ತು.
Advertisement
ಮಳೆ ಕಾರಣ ಕಿಟಕಿ ಬಾಗಿಲು ಮುಚ್ಚಿದ್ದೇ ಸಾವಿಗೆ ಕಾರಣಬ್ಯಾಂಕ್ನ ಒಂದು ಕೋಣೆಯಲ್ಲಿ ಜನರೇಟರ್ ಇಡಲಾಗಿದ್ದು, ಆ ಕೋಣೆಗೆ ಎರಡು ಕಿಟಕಿಗಳಿವೆ. ಹೆಚ್ಚಾಗಿ ಹಗಲಿ ನಲ್ಲಿ ಕರ್ತವ್ಯದ ಸಂದರ್ಭ ಮಾತ್ರ ಜನರೇಟರ್ ಬಳಕೆ ಯಾಗುತ್ತಿತ್ತು. ರಾತ್ರಿ ವೇಳೆ ವಿದ್ಯುತ್ ಹೋದರೆ ಇನ್ವರ್ಟರ್ ವ್ಯವಸ್ಥೆ ಇದೆ. ಆದರೆ ಸೋಮವಾರ ಸುರಿದ ಭಾರೀ ಮಳೆಯಿಂದ ಇನ್ವರ್ಟರ್‌ನಲ್ಲಿ ಚಾರ್ಜ್ ಖಾಲಿಯಾಗಿರುವ ಸಾಧ್ಯತೆ ಯಿದ್ದು, ಈ ನಿಟ್ಟಿನಲ್ಲಿ ಉಮೇಶ್ ಅವರು ಜನರೇಟರ್ ಸ್ಟಾರ್ಟ್ ಮಾಡಿರ ಬಹುದು ಎನ್ನ ಲಾಗಿದೆ. ಬಾಗಿಲು ಹಾಕಿತ್ತು
ಮಂಗಳವಾರ ಬೆಳಗ್ಗೆ ಬ್ಯಾಂಕ್‌ನ ಸಿಬಂದಿ ಆಗಮಿಸಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡುಬಂತು. ಒಳಗಡೆ ನೋಡಿದಾಗ ಮೂವರು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕರೆದಾಗಲೂ ಏಳದೇ ಇದ್ದಾಗ ಬ್ಯಾಂಕ್‌ನ ಮುಖ್ಯಸ್ಥರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿದ ಬಳಿಕ ಗ್ಯಾಸ್‌ಕಟ್ಟರ್‌ನಿಂದ ಬಾಗಿಲು ತುಂಡರಿಸಿದಾಗ ಮೂವರು ಮೃತಪಟ್ಟಿರುವುದು ಗೊತ್ತಾಯಿತು. ಸ್ಥಳಕ್ಕೆ ಪೊಲೀಸ್ ಕಮಿಷನರ್ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಮೊದಲ ದಿನವೇ ಸಾವು ಸೆಳೆದಿತ್ತು
ಕೊಲ್ಯ ಕಾಸಿಂಬೆಟ್ಟು ನಿವಾಸಿಯಾಗಿರುವ ಸೋಮನಾಥ್ ಈ ಹಿಂದೆ ತೊಕ್ಕೊಟ್ಟಿನ ಖಾಸಗಿ ಬ್ಯಾಂಕಿನಲ್ಲಿ ಸೆಕ್ಯೂರಿಟಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದು, ಅನಾರೋಗ್ಯದ ಕಾರಣದಿಂದ ಕೋಟೆಕಾರ್ ಬ್ಯಾಂಕ್‌ನಲ್ಲಿ ಹಗಲಿನ ಪಾಳಿಯಲ್ಲಿ ಸೆಕ್ಯುರಿಟಿಯಾಗಿರುವ ಕೊಲ್ಯದ ದಾಸ್ ಅವರ ಶಿಫಾ ರಸಿ ನಂತೆ ಸೋಮ ವಾರ ಕೆಲಸಕ್ಕೆ ಸೇರಿದ್ದರು. ರವಿವಾರ ದಾಸ್ ಅವರು ಸಂತೋಷ್‌ಗೆ ಸೋಮನಾಥ್ ಅವರನ್ನು ಪರಿಚಯಿಸಿದ್ದು, ಸೋಮ ವಾರ ದಿಂದ ಕೆ.ಸಿ. ರೋಡ್‌ನ ಬ್ಯಾಂಕ್‌ಗೆ ರಾತ್ರಿ ಪಾಳಿ ನಡೆಸಲಿ ಎಂದಿ ದ್ದರು. ಸೋಮನಾಥ್ ರಾತ್ರಿ 7.30ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು, ಉಮೇಶ್ ಅವ ರೊಂದಿಗೆ ಮಾತನಾಡಿ ಬಳಿಕ ಬ್ಯಾಂಕ್‌ನೊಳಗೆ ಕರ್ತವ್ಯ ಆರಂಭಿಸಿ ದ್ದರು. ಸೋಮವಾರ ರಾತ್ರಿ ಮಳೆ ಮತ್ತು ಸಿಡಿಲಿನ ಕಾರಣ ವಿದ್ಯುತ್ ಕೈಕೊಟ್ಟಿದ್ದ ರಿಂದ ಪ್ರಥಮ ದಿನದ ಕೆಲಸ ಸೋಮನಾಥ್ ಅವರನ್ನು ಸಾವಿನಂಚಿಗೆ ತಳ್ಳಿತ್ತು. ದೇರಳಕಟ್ಟೆಯಲ್ಲಿ ಪಾಳಿ ಮಾಡಬೇಕಿತ್ತು
ಸಂತೋಷ್ ಸೋಮವಾರ ದೇರಳಕಟ್ಟೆಯಲ್ಲಿರುವ ಕೋಟೆಕಾರು ಬ್ಯಾಂಕ್‌ನ ಶಾಖೆಯಲ್ಲಿ ಸೆಕ್ಯುರಿಟಿಯಾಗಿ ಕಾರ್ಯ ನಿರ್ವಹಿಸಬೇಕಿತ್ತು. ಹಿಂದಿನ ದಿನ ರಾತ್ರಿ ಸೆಕ್ಯುರಿಟಿಯ ಇನ್ನೊರ್ವ ಸಿಬಂದಿ ದಾಸ್ ಅವರು ಸೋಮ ನಾಥ್ ಕೆ.ಸಿ. ರೋಡ್‌ನಲ್ಲಿ ಕಾರ್ಯ ನಿರ್ವಹಿಸುವ ವಿಚಾರ ತಿಳಿಸಿ ದ್ದರೂ ಸೋಮವಾರ ಸಂತೋಷ್ ಎಂದಿನಂತೆ ಕೆ.ಸಿ.ರೋಡ್ ಬ್ಯಾಂಕ್‌ಕಡೆ ಆಗಮಿ ಸಿದ್ದರು. ಸುಮಾರು 8 ಗಂಟೆಗೆ ಆಗಮಿಸಿದ ಸಂತೋಷ್ ಮಳೆ ಮತ್ತು ಸಿಡಿಲಿನ ಕಾರಣದಿಂದ ಕೆ.ಸಿ.ರೋಡ್ ಬ್ಯಾಂಕ್‌ನಲ್ಲೇ ಉಳಿದುಕೊಂಡ ಅವರು ಕರ್ತವ್ಯ ನಿರ್ವಹಿಸಲು ಇಲ್ಲದ ಕಾರಣ ಬೇಗನೆ ನಿದ್ರೆಗೆ ಜಾರಿದ್ದರು. 8 ವರ್ಷದಿಂದ ಕರ್ತವ್ಯ
ಕೆ.ಸಿ. ರೋಡ್ ನಿವಾಸಿಯಾಗಿರುವ ಉಮೇಶ್ ಅವರು ಮನೆಯ ಪಕ್ಕದ ಬ್ಯಾಂಕ್‌ನಲ್ಲೇ ಕಳೆದ ಎಂಟು ವರ್ಷಗಳಿಂದ ಸಣ್ಣಪುಟ್ಟ ಕಾರ್ಯ ಮಾಡಿ ಕೊಂಡು ರಾತ್ರಿ ವೇಳೆ ಭದ್ರತೆಯ ದೃಷ್ಟಿಯಿಂದ ಬ್ಯಾಂಕ್‌ನಲ್ಲೇ ಮಲಗುತ್ತಿದ್ದರು. ದರೋಡೆ ಸಂದರ್ಭದಲ್ಲಿ ಇವರಿಗೂ ದರೋಡೆಕೋರರು ಹೊಡೆದಿದ್ದರು. ಬ್ಯಾಂಕ್‌ನ ಕೀಲಿಕೈ ಉಮೇಶ್ ಅವರಲ್ಲಿ ಇರುವುದರಿಂದ ಅವರು ಪ್ರತೀ ದಿನ ಮನೆಯಲ್ಲಿ ಊಟ ಮುಗಿಸಿ 7 ಗಂಟೆಗೆ ಬ್ಯಾಂಕ್‌ಗೆ ಆಗಮಿಸು ತ್ತಿದ್ದರು. ಕಳೆದ ಐದು ತಿಂಗಳಿನಿಂದ ಬ್ಯಾಂಕ್‌ನ ಭದ್ರತೆಯ ಜವಾಬ್ದಾರಿ ಇನ್ನಷ್ಟು ಹೆಚ್ಚಿತ್ತು. ಖಾಸಗಿ ಭದ್ರತಾ ಸಿಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಉಮೇಶ್ ಅಯ್ಯಪ್ಪ ವ್ರತದಲ್ಲಿದ್ದು, ವ್ರತದ ವಿಧಿಗಳನ್ನು ಮುಗಿಸಿ ಎಂದಿನಂತೆದ್ದ ಅವರು ಈ ಜನರೇಟರ್ ತಮ್ಮೆಲ್ಲರ ಸಾವಿಗೆ ಕಾರಣವಾದೀತು ಎಂದು ಊಹಿಸಿರಲಿಲ್ಲ.