Advertisement

ಬೀದರ್: ಕೋವಿಡ್ 19 ಸೋಂಕಿಗೆ ಮತ್ತೆ 3 ಬಲಿ ; ಒಂದೇ ದಿನ 43 ಪಾಸಿಟಿವ್ ಪ್ರಕರಣ

11:01 PM Aug 19, 2020 | Hari Prasad |

ಬೀದರ್: ಜಿಲ್ಲೆಯಲ್ಲಿ ಬುಧವಾರವೂ ಕೋವಿಡ್ 19 ಸೋಂಕಿನ ಹಾವಳಿ ಮುಂದುವರೆದಿದೆ.

Advertisement

ಈ ಮಹಾಮಾರಿಗೆ ಜಿಲ್ಲೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ ಮತ್ತು 43 ಜನರಲ್ಲಿ ಹೊಸದಾಗಿ ಈ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 119ಕ್ಕೆ ಏರಿಕೆಯಾದರೆ, ಪಾಸಿಟಿವ್ ಪ್ರಕರಣಗಳ ಸಂಖ್ಯೆ 3791ಕ್ಕೆ ಏರಿದೆ.

ಬುಧವಾರ ಕೋವಿಡ್ 19 ಸೋಂಕಿನಿಂದ ಇಲ್ಲಿನ ಪ್ರತಾಪ ನಗರದ 66 ವರ್ಷದ ಮಹಿಳೆ, ಬಸವ ಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ 65 ವರ್ಷದ ವ್ಯಕ್ತಿ ಹಾಗೂ ತಾಲೂಕಿನ ಬೆಟಬಾಲಕುಂದಾ ಗ್ರಾಮದ 48 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಅಧಿಕ ರಕ್ತದೊತ್ತಡ ಸೇರಿ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದ ಈ ಮೂವರರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು ಮತ್ತು ಇವರೆಲ್ಲಾ ಚಿಕಿತ್ಸೆ ಫಲಿಸದೇ ಬ್ರಿಮ್ಸ್‌ನಲ್ಲಿ ಇಂದು ಮೃತಪಟ್ಟಿದ್ದಾರೆ. ಇವರಲ್ಲಿ ಯಾರಿಗೂ ಟ್ರಾವೆಲ್ ಹಿಸ್ಟರಿ ಇದ್ದಿರಲಿಲ್ಲ.

Advertisement

ಬೀದರ್ ನಗರ ತಾಲೂಕಿನ 20 ಜನರಿಗೆ, ಭಾಲ್ಕಿ ತಾಲೂಕಿನ 7 ಜನರಿಗೆ, ಬಸವಕಲ್ಯಾಣ- ಹುಲಸೂರು ತಾಲೂಕಿನ 6 ಜನರಿಗೆ, ಹುಮನಾಬಾದ- ಚಿಟಗುಪ್ಪ ತಾಲೂಕಿನ 6 ಜನರಿಗೆ, ಔರಾದ- ಕಮಲನಗರ ತಾಲೂಕಿನ 4 ಜನರು ಸೇರಿ ಜಿಲ್ಲೆಯಲ್ಲಿ ಒಟ್ಟು 43 ಜನರಲ್ಲಿ ಹೊಸದಾಗಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿರುವುದು ಇಂದು ವರದಿಯಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3791ಕ್ಕೆ ಏರಿಕೆಯಾಗಿದೆ. ಬುಧವಾರ ಒಂದೇ ದಿನ 131 ಜನ ಸೋಂಕಿತರು ಸೇರಿ ಇದುವರಗೆ 2723 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 945 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯ 58,501 ಜನರ ಗಂಟಲ ಮಾದರಿಯ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 54,158 ಮಂದಿಯ ತಪಾಸಣಾ ವರದಿ ನೆಗೆಟಿವ್ ಬಂದಿದ್ದು, ಇನ್ನೂ 552 ಜನರ ವರದಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next