Advertisement
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 4,619 ಮಂದಿ ನಿಗಾದಲ್ಲಿದ್ದು, ಈ ಪೈಕಿ 4,567 ಮಂದಿ ಮನೆಗಳಲ್ಲೂ, 52 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. 3,256 ಸ್ಯಾಂಪಲ್‌ಗಳ ಪೈಕಿ 2,575 ಸ್ಯಾಂಪಲ್ ನೆಗೆಟಿವ್ ಬಂದಿವೆ. 392 ಸ್ಯಾಂಪಲ್ ವರದಿ ಲಭಿಸಲು ಬಾಕಿಯಿದೆ.
Related Articles
Advertisement
ಕೇರಳದಲ್ಲಿ ಈ ವರೆಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 426. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 117 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 36,667 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 36,335 ಮಂದಿ ಮನೆಗಳಲ್ಲೂ, 332 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ 102 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 20,252 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದೆ. ಲಭ್ಯ 19,442 ಮಂದಿ ಸ್ಯಾಂಪಲ್ ನೆಗೆಟಿವ್ ಫಲಿತಾಂಶ ಬಂದಿದೆ.
ಕಣ್ಣೂರು ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರುಮಂಗಳವಾರ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ, ಕಾಸರ ಗೋಡು-4, ಕಲ್ಲಿಕೋಟೆ- 4, ತಿರುವನಂತಪುರ-1 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೋವಿಡ್ 19 ವೈರಸ್ ಸೋಂಕಿತರು ಕಣ್ಣೂರು ಜಿಲ್ಲೆಯಲ್ಲಿದ್ದಾರೆ. ಒಟ್ಟು 104 ಮಂದಿಗೆ ಸೋಂಕು ಹರಡಿದ್ದು, ಒಂದು ಮನೆಯ 10 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಇನ್ನಷ್ಟು ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ವರ್ಕಾಡಿ ಯುವಕ ದುಬಾೖಯಲ್ಲಿ ಸಾವು
ಕೋವಿಡ್ 19 ವೈರಸ್ ಸೋಂಕಿನಿಂದ ವರ್ಕಾಡಿ ಧರ್ಮನಗರದ ಮಜೀರ್‌ಪಳ್ಳದ ನಿವಾಸಿ ದಿ| ಇಬ್ರಾಹಿಂ ಅವರ ಪುತ್ರ ಅಬ್ದುಲ್ ಹಮೀದ್ (38) ಅವರು ದುಬಾೖಯ ಆಸ್ಪತ್ರೆಯಲ್ಲಿ ಸಾವಿಗೀಡಾದರು. 20 ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ 19 ವೈರಸ್ ಸೋಂಕು ದೃಢಗೊಂಡಿತ್ತು. ಒಂದು ವಾರದ ಹಿಂದೆ ಅವರ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ದುಬಾೖಯಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಅಶರು 8 ತಿಂಗಳ ಹಿಂದೆ ಊರಿಗೆ ಬಂದು ವಾಪಸಾಗಿದ್ದರು.
ಸೋಮವಾರ ಕೇರಳದ ಒಟ್ಟಪ್ಪಾಲಂ ಮತ್ತು ಪತ್ತನಂತಿಟ್ಟ ನಿವಾಸಿಗಳಿಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದರು. ಈ ವರೆಗೆ ದುಬಾೖಯಲ್ಲಿ ಆರು ಮಂದಿ ಸಹಿತ ಕೊಲ್ಲಿ ರಾಷ್ಟ್ರದಲ್ಲಿ ಕೇರಳದ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿ ಕೊಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.