Advertisement

ಮೋಟಾರ್‌ ಬೈಕಿಗೆ ಟ್ರಕ್‌ ಢಿಕ್ಕಿ : ಇಬ್ಬರು ಮಹಿಳೆಯರ ಸಹಿತ ಸ್ಥಳದಲ್ಲೇ ಮೂವರ ಸಾವು

02:40 PM Jun 11, 2019 | Sathish malya |

ಗಾಝೀಪುರ, ಉತ್ತರ ಪ್ರದೇಶ : ಇಲ್ಲಿನ ಮಹಾರಾಜಗಂಜ್‌ ರೈಲ್ವೇ ಕ್ರಾಸಿಂಗ್‌ ಬಳಿ ವೇಗವಾಗಿ ಧಾವಿಸಿ ಬಂದ ಟ್ರಕ್‌, ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಮೃತರನ್ನು ಇಖಲಾಖ್‌ ಆಲಂ 41, ಪತ್ನಿ ರೇಶ್ಮಾ 36 ಮತ್ತು ಆಕೆಯ ನಾದಿನಿ ಜಬೀನಾ 39 ಎಂದು ಗುರುತಿಸಲಾಗಿದೆ. ಈ ಮೂವರೂ ನಿನ್ನೆ ಭಾನುವಾರ ನಡೆದಿದ್ದ ಈ ದುರಂತದಲ್ಲಿ ಸ್ಥಳದಲ್ಲೇ ಸಾವಪ್ಪಿದರು.

ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈ ತನಕ ಯಾವುದೇ ಬಂಧನ ನಡೆದಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next