Advertisement

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

11:53 PM Jan 03, 2025 | Team Udayavani |

ಜೆರುಸಲೇಂ: 120 ಕಮಾಂಡೋ ಗಳು, 4 ಸಿಎಚ್‌-53 ಹೆಲಿಕಾಪ್ಟರ್‌ಗಳು, 21 ಯುದ್ಧ ವಿಮಾನ, 5 ಡ್ರೋನ್‌ , 14 ಬೆಂಗಾವಲು ವಿಮಾನ, 660 ಪೌಂಡ್‌ ಸ್ಫೋಟಕಗಳು ಮತ್ತು ಕೇವಲ 3 ಗಂಟೆ!. ಇದು ಪರ್ವತ ತಪ್ಪಲಿನಿಂದ 130 ಮೀಟರ್‌ ಆಳದಲ್ಲಿ, ವರ್ಷಕ್ಕೆ 300 ಕ್ಷಿಪಣಿಗಳನ್ನು ಉತ್ಪಾದಿಸುವ ಸಿರಿಯಾದ ಭೂಗತ ಕ್ಷಿಪಣಿ ಘಟಕ ಧ್ವಂಸ ಮಾಡಲು ಇಸ್ರೇಲ್‌ ನಡೆಸಿದ ಕಾರ್ಯಾಚರಣೆ.

Advertisement

ಹೌದು, ಲೆಬನಾನ್‌ನ ಹೆಜ್ಬುಲ್ಲಾ ಉಗ್ರರಿಗೆ ನೆರವು ನೀಡಲು ಹಾಗೂ ಸಿರಿಯಾದಲ್ಲಿ ಬಶರ್‌ ಅಲ್‌ ಅಸ್ಸದ್‌ ಆಡಳಿತಕ್ಕೆ ಕ್ಷಿಪಣಿಗಳನ್ನು ಪೂರೈಸಲೆಂದು ಅಕ್ರಮವಾಗಿ ನಿರ್ಮಿಸಿದ್ದ ಬಹುದೊಡ್ಡ ಕ್ಷಿಪಣಿ ತಯಾರಕ ಘಟಕ -ಡೀಪ್‌ ಲೇಯರ್‌’ (ಇಸ್ರೇಲ್‌ ಪಡೆ ನೀಡಿದ ಹೆಸರು) ಅನ್ನು ಇಸ್ರೇಲ್‌ ಪಡೆಗಳು ಸದ್ದಿ ಲ್ಲ ದಂತೆ ರಾತೋರಾತ್ರಿ ಧ್ವಂಸಗೊಳಿಸಿವೆ. ಆದರೆ, ಈ ಕಾರ್ಯಾಚರಣೆ ನಡೆದಿದ್ದು, 2024ರ ಸೆಪ್ಟಂಬರ್‌ 8ರಂದು.

ಇದೀಗ ಇಸ್ರೇಲ್‌ ತನ್ನ ರೋಚಕ ಕಾರ್ಯಾಚರಣೆ ವಿವರ ಬಹಿ ರಂಗಪಡಿಸಿ, ಕಾರ್ಯಾಚರಣೆಯ ವೀಡಿಯೋ ಹಂಚಿ ಕೊಂಡಿದೆ. “ಆಪರೇಶನ್‌ ಮೇನಿ ವೇಸ್‌’ ಹೆಸರಿನಲ್ಲಿ ಇಸ್ರೇಲ್‌ ಗಡಿಯಿಂದ 200 ಕಿ.ಮೀ. ದೂರದಲ್ಲಿರುವ, ಸಿರಿಯಾ ದಿಂದ ಕೇವಲ 45 ಕಿ.ಮೀ.ದೂರವಿರುವ ಘಟಕವನ್ನು ನಿರ್ನಾಮ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next