Advertisement

Patanjali ಸೋನ್‌ ಪಾಪಡಿ ಪ್ರಕರಣದಲ್ಲಿ ಮೂವರಿಗೆ ಜೈಲು

12:55 AM May 20, 2024 | Team Udayavani |

ಡೆಹ್ರಾಡೂನ್‌: ಪತಂಜಲಿ ಇಲೈಚಿ ಸೋನ್‌ ಪಾಪಡಿ ತಯಾರಿಯಲ್ಲಿ ಆಹಾರ ಸುರಕ್ಷ ನಿಯಮಗಳನ್ನು ಉಲ್ಲಂ ಸಿ ರು ವುದು ಸಾಬೀತಾದ ಕಾರಣ ಉತ್ತರಾ ಖಂಡದ ಪಿತ್ರೋಗಢ ಕೋರ್ಟ್‌ ಮೂವರಿಗೆ 6 ತಿಂಗಳ ಜೈಲು ಶಿಕ್ಷೆ ನೀಡಿದೆ.

Advertisement

ಜತೆಗೆ 5,000-25,000 ರೂ.ಗಳ ವರೆಗೆ ದಂಡ ವಿಧಿಸಿದೆ. ಪಿತ್ರೋಗಢದ ಬೆರಿನಾಗ್‌ನಿಂದ 2019ರಲ್ಲಿ ಪತಂಜಲಿ ಎಲೈಚಿ ಸೋನ್‌ಪಾಪಡಿಯನ್ನು ಉ.ಪ್ರ.ದ ಘಾಜಿಯಾಬಾದ್‌ ಲ್ಯಾಬ್‌ಗ ಕಳುಹಿಸಲಾಗಿತ್ತು. ಬಳಿಕ ಅದು ಆಹಾರ ಸುರಕ್ಷ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ವರದಿ ಬಂದಿತ್ತು. ಹೀಗಾಗಿ ಅದರ ವಿತರಕರ ಮೇಲೆ ಕೇಸು ದಾಖಲಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಪ್ರಿತ್ರೋಗಢ ಚೀಫ್ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಸಂಜಯ್‌ ಸಿಂಗ್‌ ಈ ಮೂವರಿಗೂ 6 ತಿಂಗಳ ಸಜೆ ವಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next