Advertisement

Emerging World Leaders: ಉದಯೋನ್ಮುಖ ವಿಶ್ವ ನಾಯಕರ ಪಟ್ಟಿಯಲ್ಲಿ ಭಾರತದ ಮೂವರು

11:13 PM Sep 14, 2023 | Team Udayavani |

ನ್ಯೂಯಾರ್ಕ್‌: ಟೈಮ್‌ ನಿಯತಕಾಲಿಕೆ ಬಿಡುಗಡೆ ಮಾಡಿದ, ಉದಯೋನ್ಮುಖ 100 ವಿಶ್ವನಾಯಕರ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ನಂದಿತಾ ವೆಂಕಟೇಶನ್‌, ವಿನು ಡೇನಿಯೆಲ್‌ ಸ್ಥಾನ ಪಡೆದವರು.

Advertisement

ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿ, ಆಟಗಾರ್ತಿಯರಲ್ಲಿ ತುಂಬಿದ ವಿಶ್ವಾಸ ಹರ್ಮನ್‌ಪ್ರೀತ್‌ರ ಆಯ್ಕೆಗೆ ಕಾರಣವಾಗಿದೆ. ಅವರ ಕಾರಣದಿಂದ ಮಹಿಳಾ ಕ್ರಿಕೆಟ್‌ ಜನಪ್ರಿಯವಾಗುತ್ತಿದೆ. 2017ರ ವಿಶ್ವಕಪ್‌ನಲ್ಲಿ ಆಸ್ಟ್ರೇ ಲಿಯ ವಿರುದ್ಧ ಹರ್ಮನ್‌ ಬಾರಿಸಿದ ಸ್ಫೋಟಕ 171 ರನ್‌ಗಳನ್ನು ಟೈಮ್‌ ಗುರ್ತಿಸಿದೆ.

ಇನ್ನು 33 ವರ್ಷದ ನಂದಿತಾ ವೆಂಕಟೇಶನ್‌ ಕ್ಷಯ ರೋಗಕ್ಕೆ ಸೂಕ್ತ ಔಷಧ ಸಿಗದೇ ತಮ್ಮ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಅವರು ಕ್ಷಯಕ್ಕೆ ಪರಿಣಾಮ­ಕಾರಿ/ದುಬಾರಿ ಔಷಧ ಹೊಂದಿರುವ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಗೆ ಮತ್ತೂಮ್ಮೆ ಪೇಟೆಂಟ್‌ ನೀಡಬಾರದು ಎಂದು ಅರ್ಜಿ ಸಲ್ಲಿಸಿ ಗೆದ್ದರು. ಪರಿಣಾಮ ದೇಶದಲ್ಲಿ ಕ್ಷಯ ರೋಗಕ್ಕೆ ಕಡಿಮೆ ಬೆಲೆಯಲ್ಲಿ ಜನೆರಿಕ್‌ ಔಷಧ ಸಿಗುತ್ತಿದೆ. ಸ್ವತಃ ಜಾನ್ಸನ್‌ ಕಂಪನಿಯೂ ಕಡಿಮೆ ಬೆಲೆಯ ಔಷಧ ಉತ್ಪಾದನೆ ಆರಂಭಿಸಿದೆ. ಇನ್ನು ವಿನು ಡೇನಿಯೆಲ್‌ ಕೇರಳದ ಕೂಲಿಕಾರ್ಮಿಕರು, ಮೇಸಿŒಗಳು, ಸ್ಥಳೀಯರಿಂದ ಪ್ರೇರಣೆ ಪಡೆದು ಅಗ್ಗದ ಬೆಲೆಗೆ ಮನೆ ಕಟ್ಟುವ ಕ್ರಮವೊಂದನ್ನು ಸಿದ್ಧಪಡಿಸಿದ್ದಾರೆ. ಅವರು ಮಣ್ಣು, ಎಸೆದ ವಸ್ತುಗಳನ್ನೇ ಬಳಸಿ, ಸ್ಥಳೀಯ ಉತ್ಪನ್ನಗಳ ನೆರವಿನಿಂದ ಮನೆ ಕಟ್ಟಿಕೊಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next