Advertisement
1) ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಪ್ರಮೋದರಿಗೆ 2006ರಲ್ಲಿ ಕೃಷಿ ಮಾಡಬೇಕೆನಿಸಿತು. ಉದ್ಯೋಗ ತೊರೆದು, ಹಿರಿಯರಿಂದ ಬಳುವಳಿಯಾಗಿ ಬಂದಿದ್ದ 26 ಎಕರೆ ಜಮೀನಿನಲ್ಲಿ ಕೃಷಿ ಮಾಡತೊಡಗಿದರು. ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ನೆಲಗಡಲೆ ಮತ್ತು ಅರಿಶಿನ ಬೆಳೆಸಿ, ಕೊನೆಗೆ ಲೆಕ್ಕಾಚಾರ ಮಾಡಿದಾಗ ಲಾಭವೇ ಇರಲಿಲ್ಲ. ಕೃಷಿ ಕೆಲಸಗಾರರ ಅಲಭ್ಯತೆ ಅವರು ಎದುರಿಸಿದ ಇನ್ನೊಂದು ಸಮಸ್ಯೆ. (ಹತ್ತಿರದ ನಗರಕ್ಕೆ ವಲಸೆ ಹೋಗಿ, ಅಲ್ಲಿನ ಕಾರ್ಖಾನೆಗಳಲ್ಲಿ ದುಡಿಯುವುದಕ್ಕೆ ಹಳ್ಳಿಯ ಕೆಲಸಗಾರರಿಗೆ ಉತ್ಸಾಹ) ಇದರ ಪರಿಹಾರಕ್ಕಾಗಿ, ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಕಡಿಮೆ ಶ್ರಮ ಸಾಕಾಗುವ ಬೇರೆ ಬೆಳೆಗಳನ್ನು ಬೆಳೆಯಲು ಪ್ರಮೋದ್ ನಿರ್ಧರಿಸಿದರು. ಜೊತೆಗೆ, ಚಾಲಕನಿಲ್ಲದ ಟ್ರ್ಯಾಕ್ಟರಿನಂತಹ ವಿನೂತನ ತಂತ್ರಜ್ಞಾನವನ್ನು ತನ್ನ ಹೊಲದಲ್ಲಿ ಬಳಸಿದರು.
Related Articles
Advertisement
ಅದನ್ನೆಲ್ಲ ತೊರೆದು 2014ರಲ್ಲಿ ಛತ್ತೀಸ್‌ಘಡದ ಬಿಲಾಸ್‌ಪುರ ಜಿಲ್ಲೆಯ ಮೇಧಾಪುರ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡರು. ಹಿರಿಯರಿಂದ ಪಡೆದ 25 ಎಕರೆ ಜಮೀನಿನಲ್ಲಿ ಶುರುವಾದ ಕೃಷಿಯ ಆರಂಭದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: “ಆಗ ಪ್ರತಿಯೊಂದೂ ನನಗೆ ಸವಾಲಾಗಿ ತೋರುತ್ತಿತ್ತು. ಏಕೆಂದರೆ, ಕೃಷಿ ಎಂದರೆ ಏನು ಅನ್ನೋದೇ ನನಗೆ ಗೊತ್ತಿರಲಿಲ್ಲ. ಹೊಲದ ಉಳುಮೆಯಿಂದ ಶುರು ಮಾಡಿ, ಬೀಜ ಬಿತ್ತುವ ತನಕ ಕೃಷಿಯ ಪ್ರತಿಯೊಂದು ಕೆಲಸವನ್ನೂ ನಾನು ಹೊಸತಾಗಿ ಕಲಿತೆ. ನನ್ನ ಹದಿನೈದು ವರ್ಷಗಳ ಭವಿಷ್ಯನಿಧಿಯ ಉಳಿತಾಯವನ್ನೆಲ್ಲ ಕೃಷಿಯಲ್ಲಿ ಹೂಡಿದೆ. ಆರಂಭದ ವರ್ಷಗಳಲ್ಲಿ ನಷ್ಟವಾದರೂ, ಕ್ರಮೇಣ ಕೃಷಿಯಿಂದ ಲಾಭ ಗಳಿಸತೊಡಗಿದೆ.’
2014ರಲ್ಲಿ ಇನ್ನೊವೇಟಿವ್ ಅಗ್ರಿಲೈಫ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪೆನಿಯನ್ನೇ ಸ್ಥಾಪಿಸಿದರು. ಒಪ್ಪಂದ ಕೃಷಿ, ಈ ಕಂಪೆನಿಯ ವಹಿವಾಟು. ಈಗ 165ಕ್ಕಿಂತ ಅಧಿಕ ರೈತರು 300 ಎಕರೆ ಜಮೀನಿನಲ್ಲಿ ಲಾಭದಾಯಕವಾಗಿ ಕೃಷಿ ಮಾಡಲು ಸಹಕರಿಸುತ್ತಿರುವ ಸಚಿನ್‌ರ ಕಂಪೆನಿಯ ವಾರ್ಷಿಕ ವಹಿವಾಟು ಎರಡು ಕೋಟಿ ರೂಪಾಯಿ ದಾಟಿದೆ!
3) ಮತ್ತೂಬ್ಬ ಕೃಷಿ ಸಾಧಕ, ಸರಕಾರಿ ಉದ್ಯೋಗಿಯಾಗಿದ್ದ ಹರೀಶ್. ತನ್ನ ಉದ್ಯೋಗಕ್ಕೆ ರಾಜೀನಾಮೆ ಇತ್ತು ಅವರು ಶುರು ಮಾಡಿದ್ದು ಲೋಳೆಸರದ ಕೃಷಿಯನ್ನು. ರಾಜಸ್ಥಾನದ ಜೈಸಲ್ಮೇರಿನಲ್ಲಿ ಹಿರಿಯರಿಂದ ಬಂದ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದಾಗ, ಮೊದಲು ಅವರು ಮಾಡಿದ ಕೆಲಸ: ಮಣ್ಣು ಪರೀಕ್ಷೆ.
“ಕೃಷಿ ಇಲಾಖೆಯವರು ನನಗೆ ಸಲಹೆ ಮಾಡಿದ್ದು ಸಣ್ಣಜೋಳ, ಉದ್ದು ಅಂತಹ ಬೆಳೆಗಳ ಕೃಷಿ ಮಾಡಬೇಕೆಂದು. ಜೈಸಲ್ಮೇರ್ ಪ್ರದೇಶದಲ್ಲಿ ಲೋಳೆಸರಕ್ಕೆ ಬೇಡಿಕೆಯಿಲ್ಲ ಎಂಬ ಕಾರಣಕ್ಕಾಗಿ ಅವರು ಅದರ ಕೃಷಿ ಮಾಡಲು ಹೇಳಲಿಲ್ಲ ‘ ಎಂದು ನೆನಪು ಮಾಡಿಕೊಳ್ಳುತ್ತಾರೆ ಹರೀಶ್.
ಅನಂತರ ಹರೀಶ್ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಕ್ಕೆ ಶುರುವಿಟ್ಟರು. ರೈತರನ್ನು ಪರಿಣಿತರ ಜೊತೆ ಸಂಪರ್ಕಿಸುವ ಮೈ ಅಗ್ರಿಗುರು ಇತ್ಯಾದಿ ಜಾಲತಾಣ/ ಮಾಹಿತಿಮೂಲಗಳ ಮೂಲಕ ಸೂಕ್ತ ಮಾಹಿತಿ ಪಡೆದರು. ವೆಬ…-ಸೈಟ್‌ಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಸಮರ್ಪಕ ಮಾಹಿತಿ ಸಂಗ್ರಹಿಸಿದರೆ ತನ್ನ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಮಾರಬಹುದೆಂದು ತಿಳಿದುಕೊಂಡರು.
ಅವರು ಆರಂಭದಲ್ಲಿ ನೆಟ್ಟದ್ದು 80,000 ಲೋಳೆಸರದ ಸಸಿಗಳನ್ನು. ಕೆಲವೇ ವರ್ಷಗಳಲ್ಲಿ ಅವರು ಬೆಳೆಸಿದ ಸಸಿಗಳ ಸಂಖ್ಯೆ ಏಳು ಲಕ್ಷಕ್ಕೆ ಏರಿತು. ಆರು ತಿಂಗಳಲ್ಲಿ, ಲೋಳೆಸರ ಖರೀದಿಸುವ ಹತ್ತು ಜನರನ್ನು ರಾಜಸ್ಥಾನದಲ್ಲಿಯೇ ಪತ್ತೆ ಮಾಡಿದರು ಹರೀಶ್. ಅವರೆಲ್ಲರೂ ಲೋಳೆಸರದ ತಿರುಳು ಬೇರ್ಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆಂದು ತಿಳಿದುಕೊಂಡು, ತನ್ನ ಕೆಲಸಗಾರರಿಗೇ ಅದರ ಬಗ್ಗೆ ತರಬೇತಿ ನೀಡಿದರು.
ವರ್ಷಗಳು ದಾಟಿದಂತೆ ಇನ್ನಷ್ಟು ಜಮೀನು ಖರೀದಿಸಿ, ಈಗ ಸುಮಾರು 100 ಎಕರೆಯಲ್ಲಿ ಹರೀಶ್ ಲೋಳೆಸರ ಬೆಳೆಯುತ್ತಿ¨ªಾರೆ. ಧನದೇವ್ ಗ್ಲೋಬಲ್ ಗ್ರೂಪ್ ಪ್ರೈ.ಲಿ. ಎಂಬ ಅವರ ಕಂಪೆನಿ ಜೈಸಲ್ಮೇರಿನಲ್ಲಿದೆ. ಇದು ಲೋಳೆಸರದ ವಿವಿಧ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುತ್ತಿದೆ. ಅದರ ವಾರ್ಷಿಕ ವಹಿವಾಟು ಈಗ ಸುಮಾರು ಎರಡು ಕೋಟಿ ರೂಪಾಯಿ!
ಈಸಬೇಕು, ಈಸಿ ಜೈಸಬೇಕು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಪ್ರವಾಹದ ವಿರುದ್ಧ ಸಾಗಿದ ಈ ಮೂವರು ಕೃಷಿಸಾಧಕರು ಹಾಗೆ ಮುನ್ನಡೆದು ಗೆಲ್ಲಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದು ರೈತಾಪಿ ಜನರೆಲ್ಲರಿಗೂ ದಾರಿ ದೀಪ.
ಅಡ್ಡೂರು ಕೃಷ್ಣ ರಾವ್