Advertisement

ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದ ಕೇಂದ್ರ ಸರ್ಕಾರ: ಪ್ರತಿಭಟನೆ ಕೈಬಿಡಲು ಮೋದಿ ಮನವಿ

09:44 AM Nov 19, 2021 | Team Udayavani |

ಹೊಸದಿಲ್ಲಿ: ಹಲವು ತಿಂಗಳಿನಿಂದ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

Advertisement

ಕೃಷಿ ಕಾನೂನುಗಳ ಬಗ್ಗೆ ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಒಪ್ಪಿಕೊಂಡರು. ಈ ತಿಂಗಳ ಸಂಸತ್ ಅಧಿವೇಶನದಲ್ಲಿ ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು.

” ನಿಜವಾದ ಮತ್ತು ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ. ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತೇವೆ” ಎಂದು ಪ್ರಧಾನಿ ಮೋದಿ ಶುಕ್ರವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ:ಕಾಲ್ನಡಿಗೆಯಲ್ಲಿ ಬ್ರಹ್ಮಾವರ ಟು ಜಮ್ಮು ಕಾಶ್ಮೀರ: 55 ದಿನಗಳಲ್ಲಿ ಜಮ್ಮು ತಲುಪಿದ ಯುವಕ

“ನಾನೇನು ಮಾಡಿದ್ದೇನೋ ಅದೆಲ್ಲವನ್ನೂ ನಾನು ರೈತರಿಗಾಗಿ ಮಾಡಿದ್ದೇನೆ, ನಾನು ಮಾಡುತ್ತಿರುವುದು ದೇಶಕ್ಕಾಗಿ, ನಿಮ್ಮ ಆಶೀರ್ವಾದದಿಂದ, ನಾನು ನನ್ನ ಶ್ರಮದಲ್ಲಿ ಏನನ್ನೂ ಕಡಿಮೆ ಮಾಡಲಿಲ್ಲ. ಇಂದು ನಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಈಗ ಇನ್ನಷ್ಟು ಶ್ರಮಿಸುತ್ತೇನೆ, ಆದ್ದರಿಂದ ನಿಮ್ಮ ಕನಸುಗಳು, ಮತ್ತು ರಾಷ್ಟ್ರದ ಕನಸುಗಳನ್ನು ನನಸಾಗಿಸಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Koo App

आज मैं आपको, पूरे देश को, ये बताने आया हूं कि हमने तीनों कृषि कानूनों को वापस लेने का निर्णय लिया है।

इस महीने के अंत में शुरू होने जा रहे संसद सत्र में, हम इन तीनों कृषि कानूनों को Repeal करने की संवैधानिक प्रक्रिया को पूरा कर देंगे: पीएम नरेंद्र मोदी

Ravi Shankar Prasad (@ravishankarprasad) 19 Nov 2021

Advertisement

Udayavani is now on Telegram. Click here to join our channel and stay updated with the latest news.

Next