ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಪೂರ್ವ ತೀರದಲ್ಲಿರುವ ನಾರ್ತ್ ಐಲ್ಯಾಂಡ್ ನಲ್ಲಿ ಸರಣಿ ಪ್ರಬಲ ಭೂಕಂಪನಗಳು ನಡೆದಿದ್ದು, ಸುನಾಮಿಗೆ ಕಾರಣವಾಗಿದೆ. ಕಿವೀಸ್ ನೆಲದಲ್ಲಿ ಭೀತಿಗೆ ಕಾರಣವಾಗಿದ್ದು, ಕಡಲ ತೀರದಿಂದ ಜನರನ್ನು ಎತ್ತರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ.
ಎಂಟು ಗಂಟೆ ಅಂತರದಲ್ಲಿ ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿದೆ. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ನಡೆದ ಭೂಕಂಪಕ್ಕೆ ನ್ಯೂಜಿಲ್ಯಾಂಡ್ ಬೆಚ್ಚಿಬಿದ್ದಿದೆ. ಸಾವು ನೋವಿನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸುನಾಮಿ ಅಲೆಗಳು ಸುಮಾರು ಮೂರು ಮೀಟರ್ ( 10 ಅಡಿ) ನಷ್ಟು ಎತ್ತರಕ್ಕೆ ಏಳಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ ಸುಮಾರು 174 ಕಿಲೋಮೀಟರ್ (108 ಮೈಲಿ) ದೂರದಲ್ಲಿ ಸಮುದ್ರದ 20.8 ಕಿಲೋಮೀಟರ್ (13 ಮೈಲಿ) ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಭೂಕಂಪನ ನಡೆದಿತ್ತು. ಆಗಲೂ ಸುನಾಮಿ ಭೀತಿ ಎದುರಾಗಿತ್ತು.