Advertisement

ಲಾಲ್‌ಬಾಗ್‌ನಲ್ಲಿ ಮೂರು ದಿನ ದ್ರಾಕ್ಷಿ ಮೇಳ

12:48 PM Feb 24, 2018 | |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡ ಮೂರು ದಿನಗಳ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ರೈತರಿಗೆ ಹೆಚ್ಚಿನ ಆದಾಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಜತೆಗೆ ರಿಯಾಯ್ತಿ ದರದಲ್ಲಿ ಸೀಜನ್‌ ಹಣ್ಣುಗಳನ್ನು ಪೂರೈಸಲು ಸಂಪರ್ಕ ಕೊಂಡಿಯಾಗಿರುವ ಮೇಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಲಾಲ್‌ಬಾಗ್‌ನಲ್ಲಿ ಮೂರು ದಿನ, ನಂತರ ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳಲ್ಲಿ ಒಂದು ತಿಂಗಳು ಈ ಮೇಳ ನಡೆಯಲಿದೆ.  

Advertisement

ಮೇಳದಲ್ಲಿ ಹಾಪ್‌ಕಾಮ್ಸ್‌ ಕಾರ್ಯವ್ಯಾಪ್ತಿ ಹಾಗೂ ಉತ್ತರ ಕರ್ನಾಟಕದ ವಿವಿಧ ತಳಿಯ ದ್ರಾಕ್ಷಿಗಳಾದ ಬೆಂಗಳೂರು ನೀಲಿ, ಸೋನಾಕ ಸೂಪರ್‌, ಕೃಷ್ಣ  ಶರದ್‌, ಜಂಬೂ ಶರದ್‌, ಥಾಮನ್ಸ್‌ ಸೀಡ್‌ಲೆಸ್‌, ಫ್ಲೇಮ್‌ ದ್ರಾಕ್ಷಿ, ಕಿರಣ ಮತ್ತು ನಾಮಧಾರಿ ಕಲ್ಲಂಗಡಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇವೆ. ಕಳೆದ ವರ್ಷ ರಿಯಾಯ್ತಿ ದರದಲ್ಲಿ 295 ಮೆಟ್ರಿಕ್‌ ಟನ್‌ ದ್ರಾಕ್ಷಿ ಮತ್ತು 1,336 ಮೆಟ್ರಿಕ್‌ ಟನ್‌ ಕಲ್ಲಂಗಡಿ ಸೇರಿ ಒಟ್ಟಾರೆ 4.82 ಕೋಟಿ ವಹಿವಾಟು ನಡೆದಿತ್ತು.

ಈ ಬಾರಿ ಕ್ರಮವಾಗಿ 500 ಮೆಟ್ರಿಕ್‌ ಟನ್‌ ದ್ರಾಕ್ಷಿ ಮತ್ತು 2 ಸಾವಿರ ಮೆಟ್ರಿಕ್‌ ಟನ್‌ ಕಲ್ಲಂಗಡಿ ಮಾರಾಟದ ಗುರಿ ಇದ್ದು, ನಗರದಲ್ಲೇ 250 ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರಿಯಾಯ್ತಿ ದರದಲ್ಲಿ ಕಲ್ಲಂಗಡಿ ಮತ್ತು ದ್ರಾಕ್ಷಿ ದೊರೆಯಲಿವೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ. ವಿಶ್ವನಾಥ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್‌ ಅಧ್ಯಕ್ಷ ಎ.ಎಸ್‌. ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು. 

ಶೇ.10ರ ರಿಯಾಯ್ತಿ: ದ್ರಾಕ್ಷಿ ಮತ್ತು ಕಲ್ಲಂಗಡಿ ಶೇ.10ರಷ್ಟು ರಿಯಾಯ್ತಿ ದರದಲ್ಲಿ ದೊರೆಯಲಿವೆ. ವೆಬ್‌ಸೈಟ್‌: www.hopcoms.kar.in ಅಥವಾ ಮೊ: 92433 55223ಗೆ ಎಸ್‌ಎಂಎಸ್‌ ಮಾಡುವ ಮೂಲಕ ಹಣ್ಣುಗಳ ದರಪಟ್ಟಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next