ಮಹಾರಾಷ್ಟ್ರ: ಮಕ್ಕಳ ಮೇಲೆ ಎಷ್ಟೇ ನಿಗಾ ಇರಿಸಿದರೂ ಕಮ್ಮಿಯೇ, ರಜೆಯ ಸಮಯದಲ್ಲಿ ನೆರೆಹೊರೆಯ ಮಕ್ಕಳ ಜೊತೆ ಆಟವಾಡಲು ಹೋದರಂತೂ ಪೋಷಕರು ಮಕ್ಕಳ ಸುದ್ದಿಗೆ ಹೋಗುವುದಿಲ್ಲ, ಮಕ್ಕಳು ಜೊತೆಯಾಗಿ ಆಟವಾಡುತ್ತಿದ್ದಾರೆ ಎಂದು ಪೋಷಕರು ತಮ್ಮ ಪಾಡಿಗೆ ಸುಮ್ಮನಿರುತ್ತಾರೆ. ಆದರೆ ಪೋಷಕರ ನಿರ್ಲಕ್ಷದಿಂದ ಮೂರು ಮಕ್ಕಳು ಹಳೆಯ ಕಾರಿನೊಳಗೆ ಆಟವಾಡಲು ಹೋಗಿ ಉರಿಸುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಫಾರುಕ್ ನಗರದ ನಿವಾಸಿಗಳಾದ ತೌಫೀಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಎನ್ನಲಾಗಿದೆ.
ಘಟನೆ ಏನು: ಶನಿವಾರ ಮಧ್ಯಾಹ್ನದಿಂದ ಮಕ್ಕಳಿಗೆ ಶಾಲೆಗೆ ರಜೆ ಇದ್ದ ಪರಿಣಾಮ ನೆರೆಹೊರೆಯಲ್ಲಿರುವ ಸಂಬಂಧಿಕರ ಮಕ್ಕಳ ಜೊತೆ ಸೇರಿಕೊಂಡು ಮನೆಯ ಬಳಿಯೇ ಆಟವಾಡುತ್ತಿದ್ದರು ಮಕ್ಕಳು ಅವರ ಪಾಡಿಗೆ ಆಡುತಿದ್ದಾರಲ್ಲ ಎಂದು ಪೋಷಕರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದರು ಆದರೆ ಸಂಜೆಯಾಗುತ್ತಲೇ ಮನೆಯ ಬಳಿ ಆಟವಾಡುತ್ತಿದ್ದ ಮೂವರು ಮಕ್ಕಳು ಮನೆಗೆ ಬರಲೇ ಇಲ್ಲ, ಮಕ್ಕಳು ಮನೆಗೆ ಬರದೇ ಇದ್ದುದನ್ನು ಕಂಡ ಪೋಷಕರು ಮಕ್ಕಳನ್ನು ಮನೆಯ ಸುತ್ತಮುತ್ತ ಹುಡುಕಾಡಿದ್ದಾರೆ ಅಲ್ಲದೆ ತಮ್ಮ ಪರಿಚಯದವರ ಬಳಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ ಆದರೆ ಯಾವುದೇ ಸುಳಿವು ಸಿಗಲಿಲ್ಲ, ಬಳಿಕ ಪೊಲೀಸ್ ಠಾಣೆಗೆ ಮಕ್ಕಳು ನಾಪತ್ತೆಯಾದ ಕುರಿತು ದೂರು ನೀಡಿದ್ದಾರೆ. ಇತ್ತ ಪೊಲೀಸರು ಹುಡುಕಾಟ ನಡೆಸಿದರೆ ಅತ್ತ ಪೋಷಕರು ಸಂಬಂಧಿಕರು, ಸ್ಥಳೀಯರು ಸೇರಿ ನಾಪತ್ತೆಯಾಗಿದ್ದ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ ಆದರೆ ಮಕ್ಕಳು ನಾಪತ್ತೆಯಾಗಿ ಇಪ್ಪತ್ತನಾಲ್ಕು ಗಂಟೆ ಕಳೆಯುವ ವೇಳೆ ಮನೆಯ ಪಕ್ಕದಲ್ಲೇ ಐವತ್ತು ಮೀಟರ್ ದೂರದಲ್ಲಿರುವ ಹಳೆಯ ಕಾರಿನೊಳಗೆ ಮೂವರು ಮಕ್ಕಳು ಉಸಿಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಕೂಡಲೇ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಪರಿಶೀಲಿಸಿದಾಗ ಉಸಿರುಗಟ್ಟಿ ಮೃತಪಟ್ಟಿರುವುದು ದೃಢಪಟ್ಟಿದೆ.
ಪಚ್ಪೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Knocked On Coffin: ಅಂತ್ಯಕ್ರಿಯೆ ವೇಳೆ ಶವ ಪೆಟ್ಟಿಗೆಯ ಬಾಗಿಲು ಬಡಿದ ಮೃತ ಮಹಿಳೆ