Advertisement

Parliament: ಸಂಸತ್‌ ಸ್ಥಾಯಿ ಸಮಿತಿ ಪರಿಶೀಲನೆಗೆ ಮೂರು ವಿಧೇಯಕ

10:01 PM Aug 19, 2023 | Team Udayavani |

ನವದೆಹಲಿ: ಭಾರತೀಯ ದಂಡಸಂಹಿತೆ, ಅಪರಾಧ ದಂಡ ಪ್ರಕ್ರಿಯೆ ಸಂಹಿತೆ, ಸಾಕ್ಷ್ಯ ಕಾಯ್ದೆಗಳ ಸ್ಥಾನದಲ್ಲಿ ಕೇಂದ್ರ ತರಲು ಉದ್ದೇಶಿಸಿರುವ ಮೂರು ಹೊಸ ವಿಧೇಯಕಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕಾಗಿನ ಸ್ಥಾಯಿ ಸಮಿತಿಗೆ ವಹಿಸುವ ತೀರ್ಮಾನವನ್ನು ರಾಜ್ಯಸಭೆ ಸಭಾಧ್ಯಕ್ಷರಾದ ಜಗದೀಪ್‌ ಧನ್ಕರ್‌ ಕೈಗೊಂಡಿದ್ದಾರೆ.

Advertisement

ಮೂರು ತಿಂಗಳ ಒಳಗಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಈ ನಿರ್ಧಾರದ ಬಗ್ಗೆ ಆ.18ರಂದೇ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಆ.11ರಂದು ಲೋಕಸಭೆಯಲ್ಲಿ ಮೂರೂ ವಿಧೇಯಕಗಳನ್ನು ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next