ಮುಂಬಯಿ : ಮುಂದಿನ ದಿನಗಳಲ್ಲಿ ಕೆಲವು ಬಿಜೆಪಿ ನಾಯಕರು ಜೈಲಿಗೆ ಹೋಗಲಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ದೊಡ್ಡ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿಯ ಮೂವರು ದೊಡ್ಡ ನಾಯಕರು ಮತ್ತು ಕೆಲವು ಸಣ್ಣ ನಾಯಕರು ಜೈಲು ಪಾಲಾಗಲಿದ್ದಾರೆ ಎಂದಿದ್ದಾರೆ.
ತುಂಬಾ ಸಹಿಸಿಕೊಂಡಿದ್ದೇವೆ ಈಗ ನಾವು ತೋರಿಸುತ್ತೇವೆ. ಎಲ್ಲರೂ ಬೆತ್ತಲೆಯಾಗಿದ್ದಾರೆ, ಅವರು ತಮ್ಮ ನಿದ್ರೆಯನ್ನು ಕಳೆದುಕೊಂಡಿದ್ದಾರೆ, ನೀವು ಏನು ಮಾಡಬೇಕು, ಅದನ್ನು ಕಿತ್ತುಹಾಕಿ, ನನಗೆ ಭಯವಿಲ್ಲ” ಎಂದು ಸಂಜಯ್ ರಾವತ್ ಕಿಡಿಕಾರಿದ್ದಾರೆ.
ಅದೇ ಸಮಯದಲ್ಲಿ, ಮಂಗಳವಾರ, ಸಂಜೆ 4 ಗಂಟೆಗೆ ಶಿವಸೇನಾ ಭವನದಲ್ಲಿ ಪಕ್ಷವು ಸಮಾವೇಶವನ್ನು ನಡೆಸಲಿದ್ದು, ಇದರಲ್ಲಿ ಪಕ್ಷದ ಎಲ್ಲಾ ಹಿರಿಯ ನಾಯಕರು, ಶಾಸಕರು ಮತ್ತು ಸಂಸದರು ಭಾಗವಹಿಸಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದರು.
ಇತ್ತೀಚೆಗೆ ಸಂಜಯ್ ರಾವುತ್ ಅವರ ಆಪ್ತ ಸಹಾಯಕ ಪ್ರವೀಣ್ ರಾವುತ್ ಅವರನ್ನು ಇಡಿ ಬಂಧಿಸಿತ್ತು.ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಪ್ರವೀಣ್ ರಾವುತ್ ಅವರನ್ನು ಮುಂಬೈನ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಹಣದ ಮೂಲ ಮತ್ತು ದುರುಪಯೋಗದ ಮೂಲವನ್ನು ಪತ್ತೆಹಚ್ಚಲು ಬಂಧಿಸಲಾಗಿದೆ ಎಂದು ಇಡಿ ಹೇಳಿತ್ತು.
ಕಳೆದ ವರ್ಷ, ಪಿಎಂಸಿ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಏಜೆನ್ಸಿ ಪ್ರಶ್ನಿಸಿತ್ತು ಮತ್ತು ಪ್ರವೀಣ್ ರಾವುತ್ ಅವರ ಪತ್ನಿಯೊಂದಿಗೆ ಅವರು ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿತ್ತು.
ಇಡಿ ಅವರನ್ನು ನಾನು ಸ್ವಾಗತಿಸುತ್ತೇನೆ. ಸುಮ್ಮನೆ ಸುಳ್ಳು ಹೇಲುವುದು ಬೇಡ. ರಾಜಕೀಯ ಗುರಿ ಸಾಧಿಸಲು ಏಜೆನ್ಸಿ ಸುಳ್ಳು ಹೇಳಿದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಧಿಕಾರಿಯಿಂದ ಹಿಡಿದು ಸಚಿವರವರೆಗೆ ಎಲ್ಲರೂ ಜೈಲಿಗೆ ಹೋಗಿದ್ದಾರೆ. ಯಾವುದೇ ಸಂಸ್ಥೆ ಅಧಿಕಾರ ದುರುಪಯೋಗಪಡಿಸಿಕೊಂಡರೆ ಅದರ ಫಲಿತಾಂಶ ಒಳ್ಳೆಯದಲ್ಲ ಎಂದು ಸಂಜಯ್ ರಾವುತ್ ಹೇಳಿದ್ದಾರೆ.