Advertisement

ಕೇಂದ್ರದಿಂದ ಮೂರು ಕೃಷಿ ಕಾಯ್ದೆ ವಾಪಸ್‌: ಸಂಭ್ರಮ

03:07 PM Nov 20, 2021 | Team Udayavani |

ಕೋಲಾರ: ವಿವಾದಿತ ಕೃಷಿ ಕಾನೂನು ಕೇಂದ್ರ ಸರ್ಕಾರ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ನಗರದ ಬಸ್‌ ನಿಲ್ದಾಣ ವೃತ್ತದಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ಸಾರಥ್ಯದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

Advertisement

ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ, ದೆಹಲಿ ಗಡಿಯಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಚಳಿ, ಗಾಳಿ, ಮಳೆ ಎನ್ನದೇ ನಿರಂತರವಾಗಿ ಹೋರಾಟ ಕೈಗೊಂಡಿದ್ದ ರೈತ ಮುಖಂಡ ರಾಕೇಶ್‌ ಟಿಕಾಯಿತ್‌, ಯದುವೀರ್‌ ಸಿಂಗ್‌ ಹಾಗೂ ರೈತರಿಗೆ ಧನ್ಯವಾದಗಳು. ಈ ವೇಳೆ ಪ್ರಾಣ ತ್ಯಾಗ ಮಾಡಿದ ರೈತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಗುರುನಾನಕ್‌ ಜಯಂತಿಯಂದು ರೈತರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಣಯ ಕೈಗೊಂಡಿದ್ದು ಸಂತಸ ತಂದಿದೆ. ಜೊತೆಗೆ ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಹೊಸಮಟ್ನಹಳ್ಳಿ ಕೆ.ನಾರಾಯಣಗೌಡ, ಜಯ ಕರ್ನಾಟಕ ತ್ಯಾಗರಾಜ್‌, ಕರವೇ ಕದಂಬ ಸೋಮಣ್ಣ, ಕರವೇ ಕನ್ನಡಿಗರ ಸಾರಥ್ಯ ಜಿಲ್ಲಾಧ್ಯಕ್ಷ ಶೇಷಾದ್ರಿ, ಕೋಲಾರ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಎಲ್‌.ಎನ್‌.ಬಾಬು, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್‌, ಮುಳಬಾಗಿಲು ಉಪಾಧ್ಯಕ್ಷ ಧನರಾಜ್‌, ಕಾರ್ಯಧ್ಯಕ್ಷ ವಿಶ್ವನಾಥರೆಡ್ಡಿ, ತೇರಹಳ್ಳಿ ಚಂದ್ರಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next