Advertisement

ಮೂವರು ಅಪಹೃತ ಬಾಲಕಿಯರ ಬಿಡುಗಡೆ ಮಾಡಿದ PLFI ಉಗ್ರರು

12:16 PM May 08, 2018 | udayavani editorial |

ಖುಂಟಿ, ಜಾರ್ಖಂಡ್‌ : ಕಳೆದ ತಿಂಗಳಲ್ಲಿ ಖುಂಟಿ ತೋಲಿ ಪ್ರದೇಶದಿಂದ ಪಿಎಲ್‌ಎಫ್ಐ ಉಗ್ರರು ಅಪಹರಿಸಿದ್ದ ಮೂವರು ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಳೆದ ಎ.14ರಂದು ಮೂವರು ಬಾಲಕಿಯರು ತಮ್ಮ ಸ್ನೇಹಿತೆಯರೊಂದಿಗೆ ಹುಟ್ಟುಹಬ್ಬದ ಪಾರ್ಟಿ ಪ್ರಯುಕ್ತ ಹೊರಗೆ ಹೋಗಿದ್ದಾಗ ಅವರನ್ನು ಪಿಎಲ್‌ಎಫ್ಐ ಉಗ್ರರು ಅಪಹರಿಸಿದ್ದರು.

ನಿನ್ನೆ ಸೋಮವಾರ ನಸುಕಿನ ವೇಳೆ ಉಗ್ರರು ಮೂವರು ಬಾಲಕಿಯರನ್ನು ಬಿಡುಗಡೆ ಮಾಡಿದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next