Advertisement
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಮಾತಾಡಿದಕ್ಕಾಗಿ ಜೈಲಿಗೆ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂಸದೆ ಹೇಳಿಕೊಂಡಿದ್ದಾರೆ.
Related Articles
Advertisement
ರಾಣಾ ಬರೆದಿರುವ ಪತ್ರದಲ್ಲಿ, ಶಿವಸೇನೆ ಲೋಕಸಭಾ ಸದಸ್ಯ ಅರವಿಂದ ಸಾವಂತ್ ತನ್ನನ್ನು ಈ ರೀತಿಯಗಿ ಬೆದರಿಸಿದ್ದು, ಭಾರತದ ಮಹಿಳೆಯರಿಗೆ ಭಯ ಹುಟ್ಟಿಸುವಂತದ್ದು ಮತ್ತು ಅವಮಾನ ಮಾಡುವ ಧೋರಣೆಯಾಗಿದೆ. ಆದ್ದರಿಂದ, ಅರವಿಂದ ಸಾವಂತ್ ವಿರುದ್ಧ ಕಠಿಣ ಪೊಲೀಸ್ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಎಂದು ಬರೆದಿದ್ದಾರೆ.
ಇನ್ನು, ಮಹಾರಾಷ್ಟ್ರ ಸರ್ಕಾರದ ತಪ್ಪುಗಳ ವಿರುದ್ಧ ನಾನು ಮಾತನಾಡುವುದರ ಬಗ್ಗೆ ಅರವಿಂದ ಸಾವಂತ್, ಕೋಪಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ನೀವು ಹೇಗೆ ತಿರುಗಾಡುತ್ತೀರಿ ಎನ್ನುವುದನ್ನು ನಾನು ನೋಡುತ್ತೇನೆ ಎಂದು ಸಾವಂತ್ ಬೆದರಿಸಿದ್ದಾರೆ ಎಂದು ನವನೀತ್ ಪತ್ರದಲ್ಲಿ ಆರೋಪಿಸಿದ್ದಾರೆ.
‘ನಾನು ಆ ಸಮಯದಲ್ಲಿ ಏನು ಮಾಡಬೇಕು ಎಂಬುವುದು ಗೊತ್ತಾಗಲಿಲ್ಲ. ನನ್ನ ಸಹದ್ಯೋಗಿಯೊಬ್ಬರು ಪಕ್ಕದಲ್ಲೇ ಇದ್ದಿದ್ದರು, ಆತ ಏನು ಹೇಳಿದರು ಕೇಳಿಸಿಕೊಂಡಿರಾ..? ಎಂದು ನಾನು ಅವರಲ್ಲಿ ಕೇಳಿದೆ. ಹೌದು ನವನೀತ್, ನಾನು ಕೇಳಿಸಿಕೊಂಡೆ ಎಂದು ಅವರು ಹೇಳಿದರು’ ಎಂದು ರಾಷ್ಟ್ರೀಯ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ ಎಂಬುವುದು ವರದಿಯಾಗಿದೆ. ಇನ್ನು, ಈ ಘಟನೆಗೆ ರಾಜಮಂದ್ರಿ ಸಂಸದ ಭರತ್ ಮರ್ಗಾನಿ ಸಾಕ್ಷಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಗೆ ನವನೀತ್ ತಿಳಿಸಿದ್ದಾರೆ.
ಓದಿ : ಮಾ.24ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್
‘ಶಿವಸೇನೆ ಹೆಸರಿನಲ್ಲಿ ನನಗೆ ಬಂದ ಪತ್ರದ ಬಗ್ಗೆ ನಾನು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮತ್ತು ಪೊಲೀಸರಲ್ಲಿ ದೂರು ಸಲ್ಲಿಸಿದ್ದೇನೆ. ತನಗೆ ಶಿವ ಸೇನೆಯ ಹೆಸರಿನಲ್ಲಿ ಬಂದ ಬೆದರಿಕೆ ಪತ್ರದಲ್ಲಿ ಮತ್ತು ಕರೆಯಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಗ್ಗೆ ಮಾತಾಡಿದರೆ, ನಿಮ್ಮ ಸುಂದರ ಮುಖದ ಮೇಲೆ ಆ್ಯಸಿಡ್ ದಾಳಿ ಮಾಡಿ ಹೊರಗೆ ಕಾಲಿಡದಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ’ ಎಂದು ನವನೀತ್ ಉದ್ಧವ್ ಠಾಕ್ರೆ ಸರ್ಕಾರವನ್ನು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಗೃಹಮಂತ್ರಿ ಅನಿಲ್ ದೇಶ್ ಮುಖ್ ಅವರ ‘ವಸೂಲಿ’ ವಿಚಾರದ ವಿರುದ್ಧ ಮಾತನಾಡಿದ ನವನೀತ್, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದಿದ್ದರು.
ಇನ್ನು, ನವನೀತ್ ಆರೋಪವನ್ನು ತಳ್ಳಿ ಹಾಕಿದ ಸಾವಂತ್, ಇದು ಸಂಪೂರ್ಣ ಸುಳ್ಳು ಆರೋಪ. ಇದು ಅಸಭ್ಯದ ನಡೆ. ರಾಣಾ ಯಾವಾಗಲೂ ಇಂತಹುದರಲ್ಲೇ ಕಾಲ ಕಳೆಯುತ್ತಾರೆ. ನನ್ನ ಜೀವನದಲ್ಲಿ ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಮಹಿಳೆಯರಿಗೆ ಇಂತಹ ಬೆದರಿಕೆ ಹಾಕುವ ವಿಚಾರ ನನ್ನ ಕಲ್ಪನೆಯಲ್ಲೂ ಬರುವುದಿಲ್ಲ. ಘಟನೆಯನ್ನು ತಿರುಚಿ, ಪ್ರಚಾರ ಬಯಸುವ ಕೆಲವರು ನಮ್ಮ ನಡುವೆ ಇದ್ದಾರೆ ಎಂದು ಸಾವಂತ್ ನವನೀತ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಓದಿ : ದಯವಿಟ್ಟು ನಮ್ಮ ಮಗುವಿನ ಫೋಟೋ ತೆಗೆಯಬೇಡಿ : ವಿರಾಟ್ -ಅನುಷ್ಕಾ ಜೋಡಿ