ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಸೋಮವಾರ ಪ್ರತಿಭಟನೆಗಳು ಬಿರುಸಾಗಿವೆ. ಪ್ರಜಾಸತ್ತಾತ್ಮಕ ಸರ್ಕಾರವೇ ಮರಳಿ ಸ್ಥಾಪನೆಯಾಗಲಿ ಎಂದು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಜಲಫಿರಂಗಿ ಪ್ರಯೋಗ ಮಾಡಲಾಗಿದೆ.
ರಾಜಧಾನಿ ಯಾಂಗೂನ್‌ನ ವಿವಿಧ ಭಾಗಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. “ಮಿಲಿಟರಿ ಆಡಳಿತಕ್ಕೆ ಧಿಕ್ಕಾರ’ ಎಂಬ ಫಲಕಗಳನ್ನು ಹಿಡಿದ ಸಾವಿರಾರು ಮಂದಿ ಘೋಷಣೆ ಕೂಗಿದ್ದಾರೆ. ಸೇನಾಡಳಿತ ವಿರುದ್ಧದ ಆಕ್ರೋಶ ನಿಧಾನಕ್ಕೆ ಮ್ಯಾನ್ಮಾರ್‌ನಾದ್ಯಂತ ಹರಡಲಾರಂಭಿಸಿದೆ.
“ಸೇನಾಡಳಿತವನ್ನು ತಿರಸ್ಕರಿಸುತ್ತೇವೆ. ಇದನ್ನು ನಾವು ಒಪ್ಪಿಕೊಳ್ಳುವುದೇ ಇಲ್ಲ’ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಹೇಳಿದ್ದಾರೆ. ಗಮನಾರ್ಹ ಅಂಶವೆಂದೆ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ಕೂಡ ಪ್ರತಿಭಟನೆಗಳ ಬಗ್ಗೆ ಆಂಶಿಕವಾಗಿ ವರದಿಗಳನ್ನೂ ಪ್ರಕಟಿಸುತ್ತಿದೆ.
ಇದನ್ನೂ ಓದಿ:ಮೌಡ್ಯಕ್ಕೆ ತನ್ನ 6 ವರ್ಷದ ಕಂದನನ್ನೇ ಬಲಿಕೊಟ್ಟ ಹೆತ್ತ ತಾಯಿ! ಕೇರಳದಲ್ಲೊಂದು ಹೇಯ ಕೃತ್ಯ
1988 ಮತ್ತು 2007ರಲ್ಲಿ ಸೇನಾಡಳಿತ ವಿರುದ್ಧ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು. ಎರಡೂ ಸಂದರ್ಭಗಳಲ್ಲಿಯೂ ಕೂಡ ರಕ್ತಪಾತದ ಬಳಿಕವೇ ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. 2007ರಲ್ಲಿ ಬೌದ್ಧಗುರುಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯನ್ನು ಸೇನಾಡಳಿತ ನಿರ್ದಯವಾಗಿ ದಮನಿಸಿತ್ತು.