Advertisement

ಆ ಅಜ್ಜಿಗೆ ಸಾವಿರ ಸಾವಿರ ಥ್ಯಾಂಕ್ಸ್‌

01:38 PM Dec 05, 2017 | |

ನನ್ನ ಸ್ನೇಹಿತೆ ಅಪ್ಪಟ ಪರಿಸರಪ್ರೇಮಿ. ನನಗೆ ಆಕೆ ಒಂದು ಗಿಡವನ್ನು ಕಾಣಿಕೆ ನೀಡಿದಳು. ಅದು ಬೆಳೆದು ನಿಂತು ಕಣ್ಮನಗಳಿಗೆ ಸಂತಸ ನೀಡುತ್ತಿತ್ತು. ಕಾಲ ಸರಿಯಿತು. ಆ ಗಿಡವೂ ಚೆನ್ನಾಗಿ ಬೆಳೆಯಿತು. ಒಂದು ದಿನ ಆ ಗೆಳತಿ ಗೇಟಿನ ಬಳಿನಿಂತು ಅವಳು ನೀಡಿದ ಗಿಡದ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಳು.

Advertisement

“ನೀ ಕೊಟ್ಟ ಗಿಡವೇನೋ ಸುಂದರವಾಗಿ ಬೆಳೆದಿದ್ದಾಳೆ. ಆದರವಳು ಬಂಜೆ ಕಣೇ’ ಎಂದೆ. ನನ್ನ ಈ ಮಾತು ದಾರಿಯಲ್ಲಿ ಹೋಗುತ್ತಿದ್ದ ಅಜ್ಜಿಯೊಬ್ಬರ ಕಿವಿಗೆ ಬಿತ್ತು. “ಬಂಜೆ’ ಪದ ಕೇಳಿದೊಡನೆಯೇ ಬೇಸರದ ದನಿಯಲ್ಲಿ, “ಯಾಕೆ ತಾಯಿ ಬೇರೆ ಪದ ಸಿಗಲಿಲ್ವೇ ನಿನಗೆ?

ಅದು ಗಂಡು ಗಿಡವೂ ಆಗಿರಬಹುದಲ್ವೇ?’ ಎಂದಾಗ, ನನಗೆ ಜ್ಞಾನೋದಯವಾಯಿತು. ಒಬ್ಬಳು ಹೆಣ್ಣಾಗಿ ಆ ಪದ ಬಳಸಬಾರದಿತ್ತು ಎಂದು ನೊಂದೆ. ಆ ಗಿಡದ ಬಳಿ ನಿಂತು, “ಕ್ಷಮಿಸು ನನ್ನ’ ಎಂದು ಕೇಳಿಕೊಂಡೆ. ಆ ರಾತ್ರಿ ನಿದ್ರೆ ಕಣ್ಣಿಗಿಳಿಯಲಿಲ್ಲ.

ದಾರಿಯಲ್ಲಿ ಹಾದುಹೋಗುತ್ತಿದ್ದ ಆ ಅಜ್ಜಿಯ ಮಾತುಗಳು, ನನ್ನಲ್ಲಿ ಮಾನವೀಯ ಮಳೆ ಸುರಿಸಿತು. ಇವತ್ತೂ ಯಾವುದಾದರು ಗಿಡ ನೋಡಿದಾಗ, ಆ ಅಜ್ಜಿಯ ಮುಖ ಕಣ್ಮುಂದೆ ಬಂದುಹೋಗುತ್ತದೆ. ಆ ಹಿರಿಯ ಜೀವವನ್ನು ಮರೆಯಲಾರೆ.

* ಸವಿತಾ ನಾಗೇಶ್‌, ಬೆಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next