ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಸಮುದ್ರ ತೀರದಲ್ಲಿ ರಾಶಿ, ರಾಶಿ ಬಿದ್ದಿದ್ದ ಈ ಮೀನುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದಾಗ ಎಲ್ಲರು ಹುಬ್ಬೇರಿಸಿದ್ದರು..ಛೀ…ಥೂ…ಇದೇನಪ್ಪಾ ಅಸಹ್ಯ ಎಂದು ಮೂಗು ಮುರಿಯುವ ಮೊದಲು ನಿಜಕ್ಕೂ ಇದು ಏನು ಎಂಬ ಕುತೂಹಲವಿದ್ದರೆ ಮುಂದೆ ಓದಿ…
ಕ್ಯಾಲಿಫೋರ್ನಿಯಾದ ಸಮುದ್ರ ತೀರಕ್ಕೆ ಸಾವಿರಾರು ಪೆನಿಸ್ ಫಿಶ್ ಗಳು ತೇಲಿ ಬಂದಿದ್ದವು. ಇದನ್ನು ನೋಡಿದರೆ ಮನುಷ್ಯನ ಜನನಾಂಗವನ್ನೇ ಹೋಲುತ್ತದೆ. ಆದರೆ ಇದು ನಿಜಕ್ಕೂ ಸಮುದ್ರದ ಆಳದಲ್ಲಿ ಜೀವಿಸುವ ಒಂದು ಬಗೆಯ ಹುಳವಾಗಿದೆ ಎಂದು ವರದಿ ವಿವರಿಸಿದೆ.
ಇದು ಸುಮಾರು 10 ಇಂಚುಗಳಷ್ಟು ಉದ್ದವಿರುವ ಹುಳ..ಇವು ಸಾಂಪ್ರದಾಯಿಕವಾಗಿ ಸಮುದ್ರದ ಆಳದಲ್ಲಿ ಜೀವಿಸುವ ಜೀವಿಯಾಗಿದೆ ಎಂದು ವೈಲ್ಡ್ ಲೈಫ್ ಸೊಸೈಟಿಯ ಇವಾನ್ ಪಾರ್ರ ತಿಳಿಸಿದ್ದಾರೆ. ಬೇ ನೇಚರ್ ಮ್ಯಾಗಜಿನ್ ವರದಿ ಪ್ರಕಾರ, ಇದೊಂದು ಸಮುದ್ರ ಜೀವಿಯಾಗಿದೆ. ಇದನ್ನು ಕೊಬ್ಬು ತುಂಬಿಕೊಂಡಿರುವ ಹುಳ ಎಂದು ಕರೆಯುತ್ತಾರೆ. ಆದರೆ ಇದು ಥೇಟ್ ಶಿಶ್ನವನ್ನು ಹೋಲುವ ಮೀನಿನ ಆಕಾರ ಹೊಂದಿದೆ ಎಂದು ವಿವರಿಸಿದೆ.
ಇತ್ತೀಚೆಗೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸಮುದ್ರದ ಆಳದಲ್ಲಿ ಎದ್ದ ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಪರಿಣಾಮ ಈ ಕೊಬ್ಬು ತುಂಬಿದ ಹುಳಗಳು ರಾಶಿ, ರಾಶಿಯಾಗಿ ದಡಕ್ಕೆ ಬಂದು ಬಿದ್ದಿರುವುದಾಗಿ ವರದಿ ತಿಳಿಸಿದೆ.
ಸಮುದ್ರದ ಆಳದಲ್ಲಿ ಜೀವಿಸುವ ಈ ಕೊಬ್ಬು ತುಂಬಿರುವ ಹುಳಕ್ಕೆ ಕೊರಿಯಾ ಭಾಷೆಯಲ್ಲಿ ಇದಕ್ಕೆ ಡಾಗ್ ಡಿಕ್ (ನಾಯಿಯ ಶಿಶ್ನ) ಎಂದು ಕರೆಯುತ್ತಾರಂತೆ. ಅದು ಇಂಗ್ಲಿಷ್ ಗೆ ತರ್ಜುಮೆಯಾಗಿ ಪೆನಿಸ್ ಫಿಶ್ (ಜನನಾಂಗ ಹೋಲುವ ಮೀನು) ಎಂದು ಕರೆಯುತ್ತಾರೆ ಎಂದು ವರದಿ ವಿವರಿಸಿದೆ.