ಮಲ್ಪೆ: ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಪರ ರವಿವಾರ ಬೃಹತ್ ಬೈಕ್ Rally ಕಡಲತೀರದ ಪಡುತೋನ್ಸೆ ಬೆಂಗ್ರೆಯಿಂದ ಮಲ್ಪೆ ಕಲ್ಮಾಡಿ ಸಾಗಿ ಬಂತು.
ಪಡುತೋನ್ಸೆ ಬೆಂಗ್ರೆ ರಾಮ ಭಜನಾ ಮಂದಿರದಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕಾಂಗ್ರೆಸ್ ಮತ್ತು ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಪರ ಜಯ ಘೋಷಣೆಗಳನ್ನು ಕೂಗಿ ಮೆರವಣಿಗೆಗೆ ಹುರುಪು ನೀಡಿದರು. ಮಂದಿರದ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಹೊರಟಬೈಕ್ ರ್ಯಾಲಿ ಹೂಡೆ, ಗುಜ್ಜರ್‌ಬೆಟ್ಟು, ತೊಟ್ಟಂ, ವಡಭಾಂಡೇಶ್ವರ ಮಲ್ಪೆ ಮಾರ್ಗವಾಗಿ ಕಲ್ಮಾಡಿಗೆ ಸಾಗಿ ಬಂತು. ಸುಮಾರು 3000ಕ್ಕೂ ಅಧಿಕ ಬೈಕ್‌ಗಳಲ್ಲಿ ಕಾರ್ಯಕರ್ತರು ಜಯಕಾರಗಳನ್ನು ಹಾಕುತ್ತಾ ಸಾಗಿದರು. ಬಳಿಕ ಕಲ್ಮಾಡಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು.
ಕೇರಳ ಸಂಸದ ಪ್ರತಾಪನ್, ಕೆಪಿಸಿಸಿಯ ಎಂ. ಎ. ಗಪೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಹೇರೂರ್,ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರಾದ ನರಸಿಂಹ ಮೂರ್ತಿ, ಕುಶಲ ಶೆಟ್ಟಿ, ಮಹಮ್ಮದ್ ಶೀಶ್, ಕೀರ್ತಿ ಶೆಟ್ಟಿ , ದಿವಾಕರ ಕುಂದರ್, ಹರೀಶ್ ಕಿಣಿ, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ, ಸುರೇಶ್ ಶೆಟ್ಟಿ ಬನ್ನಂಜೆ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ಪ್ರಶಾಂತ್ ಪೂಜಾರಿ, ಡಾ ಸುನೀತಾ ಶೆಟ್ಟಿ,, ವೆರೋನಿಕಾ ಕರ್ನೇಲಿಯೋ, ಮಮತಾ ಶೆಟ್ಟಿ, ಸುರೇಂದ್ರ ಆಚಾರ್ಯ, ಉದಯ್ ಆಚಾರ್ಯ, ರಾಘವೇಂದ್ರ ಶೆಟ್ಟಿ, ಮೈರ್ಮಾಡಿ ಅಶೋಕ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಭುಜಂಗ ಶೆಟ್ಟಿ, ಶರತ್ ಶೆಟ್ಟಿ, ನಾಸೀರ್, ರವಿರಾಜ್, ಹಮ್ಮದ್, ಹಬೀಬ್ ಅಲಿ, ಹರೀಶ್ ಶೆಟ್ಟಿ, ಹಾಗೂ ನೂರಾರು ಕಾಂಗ್ರೆಸ್ ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
Rallyಯಲ್ಲಿ ಕಾಂಗ್ರೆಸ್ ನಾಯಕರು ಉದ್ಗರಿಸಿದ್ದು..
*ಕರಾವಳಿಯಲ್ಲಿ ಕಾಂಗ್ರೆಸ್ ಅಲೆ ಎದ್ದಾಗಲೆಲ್ಲಾ ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಬಂದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ –
ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್
Related Articles
*ಬಿಜೆಪಿ ಸರಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ, ಬಿಜೆಪಿಯಲ್ಲಿದ್ದ ಗುಂಪುಗಾರಿಕೆ, ಕಾಂಗ್ರೆಸ್ ಪಕ್ಷ ನೀಡಿದ ಆಶ್ವಾಸನೆಗಳು ಜನರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ನಮ್ಮ ನಂಬಿಕೆಯನ್ನು ಹೆಚ್ಚು ಮಾಡಿದೆ –
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ
*ಬೆಲೆ ಏರಿಕೆಯಿಂದ ಸುಸ್ತಾದ ಜನರಿಗೆ ಕಾಂಗ್ರೆಸ್ ಈ ಬಾರಿ ಒಂದು ಆಶಾ ಕಿರಣವಾಗಿ ಗೋಚರಿಸುತ್ತಾ ಇದೆ. ಹಾಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುತ್ತಾ ಇದ್ದಾರೆ –
ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ
*ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಪ್ರತಿ ಬೂತ್‌ನಿಂದ ಕಾರ್ಯಕರ್ತರರು ಹಾಜರಾಗುವಂತೆ ಮಾಡಿದ್ದು ಎದ್ದು ಕಾಣುತ್ತಿತ್ತು. ಇದು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿ ಮಾಡಿದೆ. –
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್