Advertisement
ಸುಮಾರು ಹದಿನೈದು ಜನರ ತಂಡ ಹನ್ನೆರಡು ಒಲೆಗಳಲ್ಲಿ ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿದೆ. ಇದಕ್ಕೆ 400 ಕೆಜಿ ಸಕ್ಕರೆ, 700 ಕೆಜಿ ಮಂಡಿಗೆ ಹಿಟ್ಟು, 150 ಕೆಜಿ ತುಪ್ಪ, 70 ಕೆಜಿ ಅಕ್ಕಿ ಹಿಟ್ಟು ಇನ್ನಿತರೆ ಪದಾರ್ಥ ಬಳಸಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಜನರು ಮಂಡಿಗೆ ಸವಿದಿದ್ದಾರಂತೆ.
Related Articles
Advertisement
ಪ್ರಮೋದ ಕುಲಕರ್ಣಿ, ಮಯೂರ ಸಿದ್ದಾಪುರ ಹಾಗೂ ಅವರ ಕೈಯಡಿಯಲ್ಲಿ ಅನಿರುದ್ಧ, ಬದರಿ, ರಾಘವೇಂದ್ರ, ಕೃಷ್ಣಾ ಜೋಶಿ ಸೇರಿದಂತೆ ಸುಮಾರು 15 ಜನರ ತಂಡ ಹೊಂದಿದ್ದಾರೆ. ಕೇಶವಾಚಾರ್ಯ ಭಾವಿಕಟ್ಟಿ ಅವರ ಸಹೋದರ ಮಾವನವರಾದ ರಾಘವೇಂದ್ರ ಆಚಾರ್ಯ, ಗೋಪಾಲಾಚಾರ್ಯ ಅವರಲ್ಲಿ ಮಂಡಿಗೆ ಮಾಡುವ ವಿಧಾನ ಕಲಿತಿರುವ ವೆಂಕಟೇಶಾಚಾರ್ಯ ಅವರು ಸಹ ಮಂಡಿಗೆ ತಯಾರಿಸುವಲ್ಲಿ ತಮ್ಮದೇ ಖ್ಯಾತಿ ಪಡೆದಿದ್ದಾರೆ.
ಚಿಕ್ಕವನಿದ್ದಾಗಲೇ ಮಾವನವರಿಂದ ಮಂಡಿಗೆ ಮಾಡುವುದನ್ನು ಕಲಿತು ಉಡುಪಿಯ ಅಷ್ಟ ಮಠಗಳು ಸೇರಿದಂತೆ ನಾಡಿನ ವಿವಿಧೆಡೆ ನಡೆದ ಸಮಾರಂಭಗಳಲ್ಲಿ ಮಂಡಿಗೆ ಸಿದ್ಧಪಡಿಸಿದ್ದೇನೆ. ನಾವು ನೀಡುವ ಸೇವೆ, ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಇದೆ. ಅದು ನಮಗೆ ಶ್ರೀ ರಕ್ಷೆಯಾಗಿದೆ.
ಕೇಶವಾಚಾರ್ಯ ಭಾವಿಕಟ್ಟಿ, ಮಂಡಿಗೆ ತಯಾರಕರು
– ಬಸವರಾಜ ಹೂಗಾರ