Advertisement

ಲ್ಯಾಮ್ಡಾ ಯೋಜನೆ ಜಾರಿಗೆ ಚಿಂತನೆ: ಡಿಸಿಎಂ

10:24 PM Nov 11, 2019 | Lakshmi GovindaRaju |

ಚಿಕ್ಕಮಗಳೂರು: ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಕಾಲೇಜುಗಳಲ್ಲಿ ಲ್ಯಾಮ್ಡಾ ಯೋಜನೆ ಜಾರಿಗೆ ತರಲು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್‌ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ಗಳಿಗೆ ದಾಖಲಾ ಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ರಾಜ್ಯಾದ್ಯಂತ ಸಾಕಷ್ಟು ಸೀಟುಗಳು ಭರ್ತಿಯಾಗದೆ ಖಾಲಿ ಉಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉದ್ಯೋಗವನ್ನೂ ಒದಗಿಸುವುದು ಮುಖ್ಯವಾಗಿದೆ.

Advertisement

ಅದಕ್ಕಾಗಿ ಲ್ಯಾಮ್ಡಾ ಯೋಜನೆಯನ್ನು ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಡಿ ಶಿಕ್ಷಣ ನೀಡು ವುದು ಮಾತ್ರವಲ್ಲದೇ, ಉದ್ಯೋಗದ ಭರವಸೆಯನ್ನೂ ನೀಡಿ ಶಿಕ್ಷಣದ ನಂತರ ಉದ್ಯೋಗ ಒದಗಿಸಲಾಗುವುದು ಎಂದರು. ಯುವಕ-ಯುವತಿಯರಿಗೆ ಉದ್ಯೋಗ ಮುಖ್ಯವಾದರೆ, ಸಂಸ್ಥೆಗಳಿಗೆ ಕೆಲಸಗಾರರ ಅವಶ್ಯಕತೆಯೂ ಇರುತ್ತದೆ. ಲ್ಯಾಮ್ಡಾ ಯೋಜನೆಯಡಿ ಇಬ್ಬರಿಗೂ ಅನುಕೂಲಕ್ಕಾಗಿ ಶ್ರಮಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next