Advertisement
ಸಂಪತ್ತು ಮತ್ತು ಆರೋಗ್ಯ ವಿಮೆ ವ್ಯಾಪ್ತಿಯ ಆಧಾರದಲ್ಲಿ ಭಾರತೀಯರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.
Related Articles
Advertisement
– ಮತ್ತು ಅಂತಿಮವಾಗಿ, ಮಿಸ್ಸಿಂಗ್ ಮಿಡಲ್(ಮರೆಯಾಗಿ ರುವ ಮಧ್ಯಮವರ್ಗ). ಮಧ್ಯಮವರ್ಗದ ಭಾಗವಾಗಿರುವ ಈ ಗುಂಪು ಒಂದೋ ಸ್ವಯಂ ಉದ್ಯೋಗದಲ್ಲಿ ತೊಡಗಿರುತ್ತದೆ ಅಥವಾ ಇವರೆಲ್ಲ ಅಸಂಘಟಿತ ವಲಯದಲ್ಲಿ ಕೆಲಸ ಮಾಡು ವವರು. ಹಠಾತ್ ಆರೋಗ್ಯ ಬಿಕ್ಕಟ್ಟು ಎದುರಾದರೆ ಇವರಿಗೆ ಯಾವ ರಕ್ಷಣೆಯೂ ಇರುವುದಿಲ್ಲ.
ಇಂದು ದೇಶದ ಸುಮಾರು 60 ಪ್ರತಿಶತಕ್ಕೂ ಹೆಚ್ಚು ಜನರು ಚಿಕಿತ್ಸೆಗಾಗಿ ತಮ್ಮ ಜೇಬಿನಿಂದಲೇ ನೇರವಾಗಿ ಹಣ ಖರ್ಚು ಮಾಡುತ್ತಾರೆ. ಇದರಿಂದಾಗಿ ಲಕ್ಷಾಂತರ ಜನರು ಬಡತನದ ಸುಳಿಯಲ್ಲಿ ಸಿಲುಕಿದ್ದಾರೆ.
ಭಾರತದ ಮಧ್ಯಮ ವರ್ಗದಲ್ಲಿ ಇರೋದು ಯಾರು?: ಭಾರತದ ಮಧ್ಯಮ ವರ್ಗದ ಗಾತ್ರವು 7.8 ಕೋಟಿ (ಎಕನಾಮಿಸ್ಟ್, ಜ.2018 ವರದಿ ಪ್ರಕಾರ)ಯಿಂದ 60.4 ಕೋಟಿ (ಕೃಷ್ಣನ್ ಮತ್ತು ಹತೇಕರ್, ಇಪಿಡಬ್ಲೂ ಅಧ್ಯಯನ ವರದಿ- 2017)ಯಷ್ಟಿರಬಹುದು ಎಂದು ಅಂದಾಜಿಸಲಾಗುತ್ತದೆ. ಸರಕಾರವೀಗ ಕೆಳಮಧ್ಯಮ ವರ್ಗವನ್ನು ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಯಲ್ಲಿ ತರಲು ಯೋಚಿಸುತ್ತಿದೆ. ಇದಷ್ಟೇ ಅಲ್ಲದೇ ಸರಕಾರ, ಕೋವಿಡ್ ಲಾಕ್‌ಡೌನ್ ತರುವಾಯದಿಂದ ಎಲ್ಲಾ ಉದ್ಯೋಗದಾತರೂ ತಮ್ಮ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಬೇಕೆಂದು ಕಡ್ಡಾಯಗೊಳಿಸಿದೆ. ಇವೆಲ್ಲ ಶ್ಲಾಘನೀಯ ಪ್ರಯತ್ನಗಳೇ ಆದರೂ, ನಮ್ಮ ಜನಸಂಖ್ಯೆಯ ಬಹುದೊಡ್ಡ ವರ್ಗವು ವಿಮಾ ಸುರಕ್ಷತೆಯಿಂದ ಹೊರಗೇ ಉಳಿದಿದೆ.
ಅರ್ಥಶಾಸ್ತ್ರಜ್ಞರಾದ ಕೃಷ್ಣನ್ ಮತ್ತು ಹತೇಕರ್ ಅವರು, “ದಿನಕ್ಕೆ 6-10 ಡಾಲರ್‌ನ ಮೇಲೆ ಜೀವನ ಮಾಡುವ(ಪ್ರತಿ ವ್ಯಕ್ತಿ) ವರ್ಗವನ್ನು ಮೇಲ್ಮಧ್ಯಮ ವರ್ಗ’ ಎಂದು ಕರೆಯುತ್ತಾರೆ. ಅಂದರೆ, ತಿಂಗಳಿಗೆ 45,000-80000 ಆದಾಯವಿರುವ ನಾಲ್ಕು ಜನರ ಕುಟುಂಬ ಎಂದರ್ಥ. ಈ ಕುಟುಂಬಗಳ ಬಳಿ ಹಣ ಉಳಿತಾಯ ಮಾಡುವಷ್ಟು ಆದಾಯವಿರುತ್ತದೆ ಮತ್ತು ಪ್ರತಿ ಕುಟುಂಬದ ಬಳಿ ಒಂದು ವಾಹನವಿರುತ್ತದೆ. ಈ ವರ್ಗಕ್ಕೆ ವಿಮೆಯ ಬಗ್ಗೆ ತಿಳಿವಳಿಕೆ ಇರುತ್ತದೆ. ಹೀಗಾಗಿ, ಇವರಿಗೆಲ್ಲ ಆರೋಗ್ಯ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಸುಲಭದ ಕೆಲಸ.
ದುರದೃಷ್ಟವಶಾತ್, ನಮ್ಮಲ್ಲಿ ಅಮೆರಿಕದ ಮೆಡಿಕೇರ್ ಅಥವಾ ಯುಕೆಯ ಎನ್‌ಎಚ್‌ಎಸ್‌ನಂಥ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ. ಏಕೆಂದರೆ, ಎಲ್ಲರಿಗೂ ಫಂಡಿಂಗ್ ಮಾಡುವಂಥ ಬೃಹತ್ ತೆರಿಗೆದಾರರ ಸಮೂಹ ಭಾರತದಲ್ಲಿ ಇಲ್ಲ. ನಮ್ಮ ಮಧ್ಯಮ ವರ್ಗಗಳು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆರೋಗ್ಯ ಭದ್ರತೆಯನ್ನು ಪಡೆಯಲು ಚಿಕ್ಕ ಪ್ರಮಾಣದ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಸರಕಾರಿ ಆಸ್ಪತ್ರೆಗಳು ಬೃಹತ್ ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡು ವಂತಾಗ ಬೇಕೆಂದರೆ, ಮೊದಲು ಅವುಗಳಲ್ಲಿನ ಸಿಬ್ಬಂದಿಯ “ಅಪಾರ ಕೊರತೆ’ಯ ಸಮಸ್ಯೆಯನ್ನು ಪರಿಹರಿಸಬೇಕು. ಇದು ಸಾಧ್ಯ ಆಗುವವರೆಗೂ ಭಾರತ, ಪಬ್ಲಿಕ್-ಪ್ರೈವೇಟ್ ಸಹಯೋಗ ದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
ಇನ್ಶೂರೆನ್ಸ್ ಕಂಪನಿಗಳನ್ನೊಳಗೊಂಡ ಈ ಸರಕಾರಿ-ಖಾಸಗಿ ಸಹಯೋಗದ ಮೂಲಕ, ಸರಕಾರ ಮತ್ತು ಖಾಸಗಿ ಆರೋಗ್ಯ ಪೂರೈಕೆದಾರರು ಮಧ್ಯಮ ವರ್ಗಕ್ಕೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ವೆಚ್ಚದಲ್ಲಿ ಪೂರೈಸಬಹುದಾಗಿದೆ.
ನಾಲ್ಕು ಜನರಿರುವ ಕುಟುಂಬವೊಂದಕ್ಕೆ 5 ಲಕ್ಷ ರೂಪಾಯಿಯ ಆರೋಗ್ಯ ವಿಮೆ ಪಾಲಿಸಿಯ ವೆಚ್ಚವು ಪ್ರಸ್ತುತ 10 ಸಾವಿರ ರೂಪಾಯಿಯಿಂದ 15,000 ರೂಪಾಯಿಯವರೆಗೆ ಇದೆ. ಮಾಹಿತಿ: https://www.policyx.com https://www.policyx.com/ ಅಂದರೆ, ತಿಂಗಳಿಗೆ 1000 ರೂಪಾಯಿಯಷ್ಟಾಗುತ್ತದೆ. ಈ ಕೆಳಗೆ ವಿವರಿಸಿರುವ ಕ್ರಮಗಳ ಮೂಲಕ ಈ ವೆಚ್ಚವನ್ನು ತಗ್ಗಿಸಲೂ ಸಾಧ್ಯವಿದೆ.
ಎಲ್ಲರೂ ಇನ್ಶೂರೆನ್ಸ್ ಖರೀದಿಸಿದರೆ, ಬಿಲ್‌ಗಳನ್ನು 30-50 ಪ್ರತಿಶತದಷ್ಟು ಕಡಿಮೆ ಮಾಡಬಹುದು. ವಿಮೆ ವ್ಯಾಪ್ತಿಯಲ್ಲಿ ಬರುವ ಜನರ ಆರೋಗ್ಯ ವೆಚ್ಚಗಳನ್ನೆಲ್ಲ ಒಟ್ಟುಗೂಡಿಸಿ ಗುಂಪಿನ ವಿಮಾ ಕಂತುಗಳನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಹೆಚ್ಚು ಆರೋಗ್ಯವಂತ ಜನರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿ ನಾವು ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು (ಪ್ರೀಮಿಯಂ ವಿಸ್ತರಣೆಯ ಮೂಲಕ). ಚಿಕಿತ್ಸೆಗೆ ಜನರು ತಮ್ಮ ಬಳಿ ಬರುವಂತೆ ಮನವೊಲಿಸುವ ಪರಿಣತಿ ಹಾಗೂ ಅಗತ್ಯ ಮಾನ್ಯತೆಗಳು ಖಾಸಗಿ ಆರೋಗ್ಯ ಕಂಪನಿಗಳ ಬಳಿ ಇರುತ್ತದೆ. ಈ ಕಾರಣಕ್ಕಾಗಿಯೇ ಸರ್ಕಾರವು ಆಸ್ಪತ್ರೆಗಳನ್ನು ನಿರ್ಮಿಸಲು ಖಾಸಗಿ ಆರೋಗ್ಯ ವಲಯದ ಕಂಪನಿಗಳ ಜತೆ ಕೆಲಸ ಮಾಡಬೇಕು. ಹಾಗೆಂದು ಇವೇನೂ ಡೀಲಕ್ಸ್ ಸೂಟ್‌ಗಳಿರುವ 5 ಸ್ಟಾರ್ ಆಸ್ಪತ್ರೆಗಳಾಗಿರಬೇಕು ಎಂದೇನೂ ಅಲ್ಲ. ಇದರೊಟ್ಟಿಗೆ ಈಗಿರುವ ಪ್ರಾಥಮಿಕ ಆರೈಕೆ ಕೇಂದ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಮಿಸುವುದಕ್ಕೆ ಮತ್ತು ಬಲಿಷ್ಠಪಡಿಸುವುದಕ್ಕೆ, ದ್ವಿತೀಯ ಹಂತದ ಆರೈಕೆ ಕೇಂದ್ರಗಳ ನಿರ್ಮಾಣಕ್ಕೆ ಹಾಗೂ ಕೆಲ ನಿರ್ದಿಷ್ಟ ತೃತೀಯ ಆರೈಕೆ ಕೇಂದ್ರಗಳತ್ತಲೂ ನಾವು ಗಮನ ಹರಿಸಬೇಕಿದೆ.
ತೃತೀಯ ಆರೋಗ್ಯ ಕೇಂದ್ರಗಳು ಪ್ರತಿಯೊಬ್ಬರ ಮೊದಲ ಆಯ್ಕೆ ಆಗಬಾರದು. ಏಕೆಂದರೆ ಅನೇಕ ಕಾಯಿಲೆಗಳಿಗೆ ವಿಶೇಷ ಉಪಕರಣಗಳು ಮತ್ತು ನುರಿತ ತಜ್ಞರ ಅಗತ್ಯವಿರುವುದಿಲ್ಲ. ರೋಗಿಯೊಬ್ಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ನಂತರ, ಯಾವುದೇ ಅನಗತ್ಯ ಬ್ಯಾಕ್‌ಲಾಗ್ ಇಲ್ಲ ಎನ್ನುವುದು ಖಾತ್ರಿ ಪಡಿಸಿಕೊಳ್ಳಲು ಆತನಿಗೆ ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ಅಪಾಯಿಂಟೆ¾ಂಟ್ ಕೊಡಬೇಕು. ಅಲ್ಲದೇ ಆರೈಕೆಗಾಗಿ ಸರಿಯಾದ ಕೇಂದ್ರವನ್ನು ಆರಿಸುವುದರಿಂದಾಗಿ ಚಿಕಿತ್ಸೆಯ ವೆಚ್ಚಗಳೂ ಕಡಿಮೆಯಾಗುತ್ತವೆ. ಏಕೆಂದರೆ, ಪ್ರಾಥ ಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಕೇಂದ್ರಗಳಲ್ಲಿ ಮೇಲುವೆಚ್ಚಗಳು ಬಹಳ ಕಡಿಮೆಯಿರುತ್ತವೆ.
ಇದಕ್ಕಾಗಿ ಸರ್ಕಾರ ಪರಿಣತ ಆರೋಗ್ಯ ವೃತ್ತಿಪರರೊಂದಿಗೆ ಕೆಲಸ ಮಾಡಬೇಕು. ಇದು ಕ್ಯಾನ್ಸರ್‌ನ ಆರಂಭಿಕ ರೋಗ ನಿರ್ಣಯ, ಎನ್‌ಸಿಡಿ ಸ್ಕ್ರೀನಿಂಗ್ ಮತ್ತು ಸೂಕ್ತ ಚಿಕಿತ್ಸೆಯನ್ನೂ ಒಳಗೊಂಡಿರಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಸೇವೆಗಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗುತ್ತದೆ.
ಒಬ್ಬ ವೈದ್ಯನಾಗಿ ಹೇಳುವುದಾದರೆ, ಇತ್ತೀಚೆಗೆ ಘೋಷಣೆ ಯಾದ ರಾಷ್ಟ್ರೀಯ ಆರೋಗ್ಯ ಐಡಿಯು ನಿಜಕ್ಕೂ ದೈವದತ್ತ ವಾಗಿದೆ. ಒಬ್ಬ ರೋಗಿಯ ನಿಖರ ಮತ್ತು ಸಂಪೂರ್ಣ ಇತಿಹಾಸ ಇದರಿಂದ ದೊರೆಯುವುದರಿಂದಾಗಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು, ವೈದ್ಯಕೀಯ ಮಾನವಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಚಿಕಿತ್ಸಾ ಪ್ರಮಾದ ಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಈ ವಿಚಾರದಲ್ಲಿ ಗೌಪ್ಯತೆ ಪಾಲನೆಯ ಬಗ್ಗೆ ಆತಂಕವೂ ವ್ಯಕ್ತವಾಗು ತ್ತಿದ್ದು, ಈ ವಿಚಾರದಲ್ಲಿ ಏನು ಮಾಡಬೇಕು ಎನ್ನುವುದು ಪರಿ ಣತರಿಗೆ ಬಿಟ್ಟ ವಿಚಾರ. ಕೋವಿಡ್-19 ಸಾಂಕ್ರಾಮಿಕವು ಯಾರು ಬೇಕಾದರೂ ಅನಾ ರೋಗ್ಯಕ್ಕೆ ಈಡಾಗಬಹುದು ಮತ್ತು ಆಸ್ಪತ್ರೆಗೆ ಸೇರ ಬಹುದು ಎನ್ನುವುದನ್ನು ನಮಗೆ ತೋರಿಸಿಕೊಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಜನರು ಮೊದಲು ಹೇಗಿದ್ದರೋ ಮುಂದೆಯೂ ಹಾಗೆ ಇರುತ್ತಾರೆ ಎಂದು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಈ ವಿಷಯದಲ್ಲಿ ನಾವೇನಾದರೂ ಮಾಡಲೇಬೇಕು ಮತ್ತು ಅಗತ್ಯ ಹೆಜ್ಜೆಗಳನ್ನೂ ಈಗಲೇ ಇಡಬೇಕಿದೆ.
ಆರೋಗ್ಯ ವ್ಯವಸ್ಥೆ ಎಷ್ಟು ಬಲಿಷ್ಠವಾಗಿರುತ್ತದೋ, ಭಾರತವೂ ಅಷ್ಟೇ ಬಲಿಷ್ಠವಾಗಿರಬಲ್ಲದು ಎನ್ನುವ ಅಂಶವನ್ನು ಬೇಗನೇ ಅರಿತು, ಅದನ್ನು ಸಾಧಿಸುವ ಮಾರ್ಗದಲ್ಲಿ ಕೆಲಸ ಮಾಡೋಣ.
ಡಾ. ಸುದರ್ಶನ ಬಲ್ಲಾಳ (ಲೇಖಕರು, ಮುಖ್ಯಸ್ಥರು, ಮಣಿಪಾಲ್ ಆಸ್ಪತ್ರೆಗಳು)