Advertisement
ಡಿ.ಸಿ. ಲೂಟಿಗೆ ಯತ್ನ2003-2005 ಅವಧಿಯಲ್ಲಿ ದ.ಕ. ಡಿಸಿಯಾಗಿದ್ದವರು ಹೊಸದಾಗಿ ಮದುವೆಯಾಗಿದ್ದು ತಣ್ಣೀರು ಬಾವಿಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಲೂಟಿಗೆ ಯತ್ನಿಸಿದ್ದರು. ಪ್ರಕರಣ ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿಗಳು ಕಠಿನ ಕ್ರಮ ಕೈಗೊಂಡಿದ್ದು ಹಲವು ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು. ಅಂದಿನ ಕ್ರಮವೇ ಇನ್ನೂ ಮುಂದುವರಿದಿದ್ದರೆ ಇಂದು ಅಕ್ರಮ ಚಟುವಟಿಕೆಗಳು, ಕೊಲೆ ಕೃತ್ಯಗಳಂತಹ ಅಪರಾಧ ಚಟು ವಟಿಕೆಗಳು ನಿಯಂತ್ರಣಕ್ಕೆ ಬರುತ್ತಿದ್ದವು. ಆದರೆ ಹಾಗಾಗಿಲ್ಲ ಎನ್ನುವುದು ಇತ್ತೀಚಿನ ಘಟನೆಯೇ ಸಾಕ್ಷಿ.
ಈ ಭಾಗದಲ್ಲಿ ಮಾದಕ ವಸ್ತು ಬೇಕಾಬಿಟ್ಟಿ ಲಭ್ಯವಾಗುತ್ತಿರುವುದರಿಂದ ಅಪರಾಧ ಚಟುವಟಿಕೆಗಳೂ ಹೆಚ್ಚಾಗಿವೆ. ತಣ್ಣಿರುಬಾವಿ, ಬೆಂಗ್ರೆ ಪ್ರವಾಸಿ ತಾಣವಾಗಿದ್ದು, ಕಿಡಿಗೇಡಿಗಳ ಕಿರುಕುಳವೂ ಸಾಮಾನ್ಯವಾಗಿದೆ. ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಯತ್ನಿಸುವೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿನ ಕ್ರಮಕ್ಕೆ ಸೂಚಿಸಲಾಗಿದೆ. ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.