Advertisement
ಮೂಲತಃ ಉಪ್ಪಿನಂಗಡಿಯ ಮುಳಿಯ ನಿವಾಸಿ, ಪ್ರಸಕ್ತ ಇಳಂತಿಲದ ಕುಂಟಾಲಕಟ್ಟೆ ಎಂಬಲ್ಲಿ ವಾಸ್ತವ್ಯವಿರುವ ಲಕ್ಷ್ಮೀ ಹೆಗ್ಡೆ (85) ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳಿಂದಲೇ ತಿರಸ್ಕಾರಕ್ಕೆ ಒಳಗಾಗಿ ಉಪ್ಪಿನಂಗಡಿಯ ಪರಿಚಯಸ್ಥರ ಮನೆಯಲ್ಲಿ ಆಶ್ರಯ ಕಂಡಿದ್ದರು. ಉಪ್ಪಿನಂಗಡಿ ಪಿಎಸ್‌ಐ ನಂದ ಕುಮಾರ್, ವೃದ್ಧೆಯ ಮಕ್ಕಳನ್ನು ಸಂಪ ರ್ಕಿಸಿ ವಿನಂತಿಸಿದರೂ ಪ್ರಯೋಜನ ಆಗಲಿಲ್ಲ. ಒಬ್ಬ ಮಗ ತಾಯಿಯನ್ನು ಕರೆದೊಯ್ಯಲು ಮುಂದಾದರೂ ಹಿಂದಿನ ಕಹಿ ಘಟನೆಯಿಂದಾಗಿ ಲಕ್ಷ್ಮೀ ಹೆಗ್ಡೆ ಅವರೇ ನಿರಾಕರಿಸಿದರು. ಯಾರಿಗೂ ಬೇಡವಾಗಿ ದ್ದಲ್ಲಿ ನನ್ನನ್ನು ಅನಾಥಶ್ರಮಕ್ಕೆ ಸೇರಿಸಿ ಎಂದು ಅಂಗಲಾಚಿದ್ದರು.
ಹೆತ್ತಾಕೆಯನ್ನೇ ಕಡೆಗಣಿಸಿದ ಮಕ್ಕಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಗ್ಡೆ ಅವರಿಂದ ದೂರು ಸ್ವೀಕರಿಸಿ, ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಅನುಸಾರ ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರು ಚಿಂತಿಸುತ್ತಿರುವ ಕುರಿತು ಮಾಹಿತಿ ಪಡೆದ ವೃದ್ಧೆಯ ಎರಡನೇ ಪುತ್ರ ತನ್ನ ತಾಯಿಯನ್ನು ಸಲಹುವುದಾಗಿ ತಿಳಿಸಿ ತಮ್ಮ ಮನೆಗೆ ಕರೆದೊಯ್ದರು.