Advertisement

Sanatana Remark; ಸನಾತನ ಧರ್ಮ ಟೀಕಿಸುವವರಗೆ ಏಡ್ಸ್, ಕುಷ್ಠ ರೋಗ ಬಂದಿದೆ: ಶಾಸಕ ಯತ್ನಾಳ್

01:13 PM Sep 08, 2023 | Team Udayavani |

ರಾಯಚೂರು: ಸನಾತನ ಧರ್ಮಕ್ಕೆ ರೋಗ ಬಂದಿಲ್ಲ. ಸನಾತನ ಧರ್ಮದ ಬಗ್ಗೆ ಮಾತನಾಡುವರಿಗೆ ಕುಷ್ಠ ರೋಗ, ಏಡ್ಸ್ ಹತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Advertisement

ರಾಯಚೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮೊಗಲರು ಎಷ್ಟು ವರ್ಷ ನಮ್ಮ ದೇಶ ಆಳಿದ್ದರು. ಔರಂಗಜೇಬ್ ನಂತಹ ಮತಾಂಧ ರಾಜನಿಗೂ ಭಾರತವನ್ನ ಇಸ್ಲಾಮೀಕರಣ ಮಾಡಲು ಆಗಲಿಲ್ಲ. ಮೊಹಮ್ಮದ್ ಘೋರಿ, ಘಜ್ನಿ ದಾಳಿ ಮಾಡಿದರೂ ಏನು ಆಗಲಿಲ್ಲ. ಒಬ್ಬ ಮಂತ್ರಿ ಹೇಳುತ್ತಾರೆ ಸನಾತನ ಧರ್ಮ ಹುಟ್ಟು ಎಲ್ಲಿ ಅಂತ? ಆ ಮಂತ್ರಿಗೆ ಅವರ ಹುಟ್ಟೇ ಅವರಿಗೆ ಗೊತ್ತಿಲ್ಲ. ಇನ್ನೂ ಸನಾತನ ಧರ್ಮದ ಬಗ್ಗೆ ಏನು ಪ್ರಶ್ನೆ ಮಾಡುತ್ತಾರೆ ಎಂದರು.

ಇವರಿಗೆ ಧಮ್, ತಾಕತ್ ಇದ್ದರೆ ಇಸ್ಲಾಂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ. ಕರುಣಾನಿಧಿ ಯಾರು ಅವನು ಸನಾತನ ಧರ್ಮದಲ್ಲಿಯೇ ಹುಟ್ಟಿದವನು. ಕೆಟ್ಟ ಹುಳುಗಳು ಈಗ ಹೊರಗೆ ಬರುತ್ತಿವೆ. ಡಿಎಂಕೆ ನಾಶವಾಗಲಿದೆ. ಮೊದಲಿನಂತೆ ತಮಿಳುನಾಡು ಉಳಿದಿಲ್ಲ ಎಂದರು.

ಸನಾತನ ಧರ್ಮಕ್ಕೆ ಯಾರು ಸ್ಥಾಪಕರೇ ಇಲ್ಲ. ಸನಾತನ ಧರ್ಮಕ್ಕೆ ಕೊನೆಯೇ ಇಲ್ಲ. ಸನಾತನ ಧರ್ಮ ಅನಂತ. ಸನಾತನ ಧರ್ಮ ಈ ದೇಶದ ಸಂಸ್ಕೃತಿ. ಐದು ಸಾವಿರ ವರ್ಷಗಳ ಹಿಂದೆ ರಾಮಾಯಣ ಘಟಿಸಿದೆ. 3.5 ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಸನಾತನ ಧರ್ಮದ ಮೂಲ ಹುಡುಕಲು ಯಾರಿಗೂ ಸಾಧ್ಯವಿಲ್ಲ. ಸನಾತನ ಧರ್ಮ ದೇವರ ಸೃಷ್ಟಿಯಾಗಿದೆ ಎಂದರು.

ಇದನ್ನೂ ಓದಿ:Ashtami Special: ಜನರಿಂದ ಹಣ ಪಡೆಯದೆ ಅಷ್ಟಮಿ ಶುಭಾಶಯ ಹಂಚಿಕೊಂಡ ರಾಕ್ಷಸ ವೇಷಧಾರಿಗಳು

Advertisement

ನಮ್ಮ ದೇಶದ ಸಂವಿಧಾನ ಉಳಿಯಬೇಕೆಂದರೆ ಸನಾತನ ಉಳಿಯಬೇಕು.  ಭಾರತ ಇಸ್ಲಾಮೀಕರಣವಾದರೆ ಸಂವಿಧಾನವೇ ಹೋಗಿಬಿಡುತ್ತದೆ. ಅವರದೇ ಆಡಳಿತ ಬರುತ್ತದೆ. ಜಿಹಾದ್ ಬರುತ್ತದೆ. ಪಾಕಿಸ್ತಾನದಲ್ಲಿ ಮೀಸಲಾತಿ ಇದೆಯೇ?  ಜಮ್ಮು ಕಾಶ್ಮೀರದಲ್ಲಿ ಕಲಂ 370 ಜಾರಿಗೆ ಮಾಡುವ ಮುನ್ನ ಮೀಸಲಾತಿ ಇರಲಿಲ್ಲ.   ಜಮ್ಮು ಕಾಶ್ಮೀರದಲ್ಲಿ ಮೋದಿಯವರು ತಂದಿರುವ ‌ಆರ್ಟಿಕಲ್ 370ರಿಂದ ದಲಿತರಿಗೆ ಚುನಾವಣೆಗೆ ಅವಕಾಶ ಸಿಕ್ಕಿದೆ.  ಕಾಶ್ಮೀರದಲ್ಲಿ ಬಾಬಾ ಸಾಹೇಬ್ ರ ನಂತರ ಮೀಸಲಾತಿ ಕೊಟ್ಟವರು ಪ್ರಧಾನಿ ಮೋದಿ. ಬಾಬಾ ಸಾಹೇಬರು ಸನಾತನ ಧರ್ಮ ‌ನಾಶವಾಗಬೇಕು ಎಂದು ಹೇಳಿಲ್ಲ. ಈಗ ಹೇಳಿಕೆ ನೀಡುವವರು ಸನಾತನ ಧರ್ಮಕ್ಕೆ ಕಾನ್ಸರ್ ಇದ್ದಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.