Advertisement

ಕಂದಾಚಾರ ಖಂಡಿಸಿದ್ದವರು ಮಡಿವಾಳ ಮಾಚಿದೇವ

06:50 PM Feb 02, 2021 | Team Udayavani |

ಚಿಕ್ಕಬಳ್ಳಾಪುರ: 12ನೇ ಶತಮಾನದಲ್ಲಿ ಸಮಾಜ ದಲ್ಲಿನ ಮೂಢನಂಬಿಕೆ, ಧಾರ್ಮಿಕ ಕಂದಾಚಾರ ಗಳನ್ನು ಖಂಡಿಸಿ, ಸಮಾಜಕ್ಕೆ ಸನ್ಮಾರ್ಗ ತೋರಿದ ಶರಣರಲ್ಲಿ ಮಡಿವಾಳ ಮಾಚಿದೇವ ಪ್ರಮುಖರಾಗಿ ದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಚ್‌. ಅಮರೇಶ್‌ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿ ದೇವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾನ್‌ ಶರಣರು ನಡೆಸಿದ ವಚನ ಚಳವಳಿಯು ಅದ್ಭುತ ಕಾರ್ಯವಾಗಿತ್ತು ಮಡಿವಾಳ ಮಾಚಿದೇವ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಅವರ ಕಾರ್ಯ ನಿಷ್ಠೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ:ಶೀಘ್ರದಲ್ಲೇ ನರ್ಸರಿಗಳನ್ನು ಪ್ರಾರಂಭಿಸುತ್ತೇವೆ : ಕೇಜ್ರಿವಾಲ್

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ, ಜಿಲ್ಲಾ ಪಂಚಾ ಯತ್‌ ಯೋಜನಾ ನಿರ್ದೇಶಕ ಗಿರಿಜಾಶಂಕರ್‌, ಮಡಿವಾಳ ಸಮಾಜದ ಮುಖಂಡ ಡಾ . ರಂಗಯ್ಯ, ಮಡಿವಾಳ ಮಾಚಿದೇವರ ಸಂಘದ ಜಿಲ್ಲಾ ಧ್ಯಕ್ಷ ಪದ್ಮಾವತಮ್ಮ, ತಾಲೂಕು ಅಧ್ಯಕ್ಷ ಮುನಿ  ನಾರಾಯಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next