ಚಿತ್ರದುರ್ಗ: ಮಹಿಳೆಯರಿಗೆ ಉಚಿತ ಬಸ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ರಕ್ಷಣೆ ಕೊಡುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ಬಿಜೆಪಿ ವಿಪಕ್ಷವಾಗಿ ಸಕಾರಾತ್ಮಕ ಹೋರಾಟ ಮಾಡಲಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಚಿತ್ರದುರ್ಗದಲ್ಲಿ ವಿವಿಧ ಮಠಗಳಿಗೆ ಅವರು ಇಂದು ಭೇಟಿ ನೀಡಿದರು. ಬೋವಿ ಮಠಕ್ಕೆ ಭೇಟಿ ನೀಡಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಆಶೀರ್ವಾದ ಪಡೆದರು. ಮಾದಾರ ಗುರುಪೀಠಕ್ಕೆ ಭೇಟಿ ನೀಡಿ ಮಾದಾರ ಚನ್ನಯ್ಯ ಶ್ರೀ ಆಶೀರ್ವಾದ ಪಡೆದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿವೆ. ಈಗಲೂ ಬಡವರು ಬಡವರಾಗಿ ಉಳಿದಿದ್ದಾರೆ. ಗ್ಯಾರಂಟಿ ಕೊಡುವ ಸಂದರ್ಭಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದರು.
ಇದನ್ನೂ ಓದಿ:”ನನಗಿದು ಸ್ಪೆಷಲ್ ಸಿನಿಮಾ…”: ‘ಯದಾ ಯದಾ ಹೀ’ ಕುರಿತು ಹರಿಪ್ರಿಯಾ ಮಾತು
ಎನ್ ಇಪಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರಧಾನಿ ಮೋದಿ ಮುಂದಾಲೋಚನೆಯಿಂದ ಎನ್ ಇಪಿ ಯೋಜನೆ ಜಾರಿಯಾಗಿದೆ. ಎನ್ ಇಪಿ ವಿಚಾರದಲ್ಲಿ ವಿಪಕ್ಷಗಳ ರಾಜಕೀಯ ಖಂಡನೀಯ ಎಂದರು.
ಬಿಜೆಪಿ ವಿಪಕ್ಷವಾಗಿ ಅನೇಕ ವರ್ಷ ದುಡಿದಿದೆ, ಹೋರಾಟ ಮಾಡಿದೆ. ಈಗಿನ ಹಿನ್ನೆಲೆಯಿಂದ ನಾವು ಎದೆಗುಂದುವುದಿಲ್ಲ. ಈಗಾಗಲೇ ಕಾಂಗ್ರೆಸ್ ನವರು ಗೊಡ್ಡು ಬೆದರಿಕೆ ಹಾಕುತ್ತಿದ್ದಾರೆ. ಎಲ್ಲವನ್ನೂ ಎದುರಿಸುತ್ತೇವೆ, ಹೆದರಿ ಓಡುವ ಪ್ರಶ್ನೆಯಿಲ್ಲ ಎಂದು ವಿಜಯೇಂದ್ರ ಹೇಳಿದರು.