Advertisement

ಈ ಮತದಾರನ ಆಯ್ಕೆ ಆದ್ಯತೆಯೇ ವಿಭಿನ್ನ

11:48 AM Mar 29, 2019 | Lakshmi GovindaRaju |

ಕ್ಷೇತ್ರದ ವಸ್ತುಸ್ಥಿತಿ: ದಕ್ಷಿಣ ಲೋಕಸಭಾ ಕ್ಷೇತ್ರದ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ, ಚಿಕ್ಕಪೇಟೆ ಮತದಾರರು ತುಂಬಾ ಭಿನ್ನ. ಇಲ್ಲಿ ಒಮ್ಮೆ ಆಯ್ಕೆಯಾದವರು ಮತ್ತೂಂದು ಅವಧಿಗೆ ಆಯ್ಕೆಯಾದದ್ದು ತುಂಬಾ ಅಪರೂಪ. ಲೋಕಸಭಾ ಚುನಾವಣೆಯಲ್ಲಿ ಕೂಡ 2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೃಷ್ಣ ಬೈರೇಗೌಡರಿಗೆ ಅತಿ ಹೆಚ್ಚು ಮತ ನೀಡಿದ್ದ ಇಲ್ಲಿನ ಮತದಾರರು 2014ರಲ್ಲಿ ಅನಂತಕುಮಾರ್‌ ಪರ ಒಲವು ತೋರಿದ್ದರು.

Advertisement

ಈ ಎರಡೂ ಅವಧಿಯಲ್ಲಿ ಚಿಕ್ಕಪೇಟೆಯಲ್ಲಿ ಹೆಚ್ಚು ಮತಗಳನ್ನು ಗಳಿಸಿದ ಪಕ್ಷಗಳೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದವು (ಇದು ಕಾಕತಾಳೀಯವೂ ಇರಬಹುದು). ಇದು ಇಲ್ಲಿನ ಮತದಾರರ ಪ್ರಬುದ್ಧತೆಗೆ ಒಂದು ಉದಾಹರಣೆ. ಪಾಲಿಕೆ ವಿಷಯದಲ್ಲೂ ಸಮಾನ ಹಂಚಿಕೆ. ಅಂದರೆ, ಏಳು ವಾರ್ಡ್‌ಗಳ ಪೈಕಿ ತಲಾ ಮೂರು ಕಾಂಗ್ರೆಸ್‌ ಮತ್ತು ಬಿಜೆಪಿ ಗೆದ್ದಿದ್ದರೆ, ಒಂದು ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. 2010ರಲ್ಲೂ ಇದೇ ಚಿತ್ರಣ ಇತ್ತು.

ಅಂದಹಾಗೆ, ಹಳೆಯ ಬೆಂಗಳೂರಿನಲ್ಲಿ ಬರುವ ಚಿಕ್ಕಪೇಟೆಯಲ್ಲಿ ವಲಸಿಗರೇ ಹೆಚ್ಚಾಗಿದ್ದು, ಅವರಲ್ಲಿ ಬಹುತೇಕ ವ್ಯಾಪಾರಿಗಳೇ ಆಗಿದ್ದಾರೆ. ಅವರೆಲ್ಲಾ ಹಾಕುವ ಮತಗಳು ಕೂಡ ಅಳೆದು ತೂಗಿ ಹಾಕುವುದರಿಂದಲೇ ಫ‌ಲಿತಾಂಶ ಕೂಡ ಅಷ್ಟೇ ಅಚ್ಚರಿ ಆಗಿರುತ್ತದೆ ಎಂದು ಸ್ಥಳೀಯ ಮತದಾರರ ಮಂಜುನಾಥ್‌ ಎಂಬುವರು ಚಟಾಕಿ ಹಾರಿಸಿದರು. ಈ ಹಿಂದೆ ಕ್ಷೇತ್ರ ಮರುವಿಂಗಡಣೆ ವೇಳೆ ಈ ಕ್ಷೇತ್ರದ ಸ್ವಲ್ಪ ಭಾಗ ಗಾಂಧಿ ನಗರಕ್ಕೆ ಹಂಚಿಹೋಗಿದೆ.

ಪ್ರಮುಖ ಕೊಡುಗೆಗಳು
-ಜನಔಷಧ ಕೇಂದ್ರಗಳ ಸ್ಥಾಪನೆ
-ಇಲ್ಲಿ ಹಾದುಹೋಗಿರುವ “ನಮ್ಮ ಮೆಟ್ರೋ’ ಮಾರ್ಗಕ್ಕೆ ಅನುದಾನ ತರುವಲ್ಲಿ ಶ್ರಮ
-ಗಿಡ ನೆಡುವ ಕಾರ್ಯಕ್ರಮಕ್ಕೆ ಒತ್ತು ಕೊಟ್ಟಿದ್ದು, ನೂರಾರು ಗಿಡಗಳನ್ನು ನೆಡುವುದರ ಜತೆಗೆ ನಿರ್ವಹಣೆ

ನಿರೀಕ್ಷೆಗಳು
-ತ್ಯಾಜ್ಯದಿಂದ ವಿದ್ಯುತ್‌ ಘಟಕ ಸ್ಥಾಪನೆ ಆಗಬೇಕು.
-ಕೆಂಪಾಂಬುದಿ ಕೆರೆ ಅಭಿವೃದ್ಧಿ

Advertisement

-ವಾರ್ಡ್‌ಗಳು- 7
-ಬಿಜೆಪಿ- 3
-ಕಾಂಗ್ರೆಸ್‌- 3
-ಜೆಡಿಎಸ್‌- 0
-ಇತರೆ- 1

-ಜನಸಂಖ್ಯೆ- 3,39,342
-ಮತದಾರರ ಸಂಖ್ಯೆ- 2,09,508
-ಪುರುಷರು- 1,07,448
-ಮಹಿಳೆಯರು- 1,02,060

2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,19,395 (ಶೇ. 58.45)
-ಬಿಜೆಪಿ ಪಡೆದ ಮತಗಳು- 58,444 (ಶೇ. 49)
-ಕಾಂಗ್ರೆಸ್‌ ಪಡೆದ ಮತಗಳು- 55,774 (ಶೇ. 46.7)
-ಜೆಡಿಎಸ್‌ ಪಡೆದ ಮತಗಳು- 1,622 (ಶೇ. 1.4)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಶಾಸಕ- ಆರ್‌.ವಿ. ದೇವರಾಜ್‌ (ಕಾಂಗ್ರೆಸ್‌)
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 3
-ಕಾಂಗ್ರೆಸ್‌ ಸದಸ್ಯರು- 3
-ಜೆಡಿಎಸ್‌ ಸದಸ್ಯರು- 0
-ಇತರೆ- 1

ಮಾಹಿತಿ: ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next