Advertisement
ಹೌದು ಇದು ನಂಬಲೇ ಬೇಕಾದ ವಿಚಾರ, ಆಂಧ್ರಪ್ರದೇಶದ ಅಮದಲವಾಲಸ ಮಂಡಲ್‌ನಲ್ಲಿರುವ ಕಾನುಗುಲವಾಲಸ ಎಂಬ ಪುಟ್ಟ ಹಳ್ಳಿಯೇ ಈಗ ಹೆಚ್ಚು ಪ್ರಸಿದ್ದಿ ಪಡೆದ ಹಳ್ಳಿಯಾಗಿದೆ.ಈ ಹಳ್ಳಿಯಲ್ಲಿ 500 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 2,200 ಮತದಾರರಿದ್ದಾರೆ. ಮಂಡಲ ಪ್ರಧಾನ ಕಚೇರಿಯಿಂದ ಈ ಗ್ರಾಮಕ್ಕೆ ಕೇವಲ 2 ಕಿ.ಮೀ.ಗಳಷ್ಟೇ ದೂರವಿದ್ದರೂ, ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ ಈ ಹಳ್ಳಿಯಲ್ಲಿ ಪಡೆಯಬಹುದಾಗಿತ್ತು. ಆದರೂ ಈ ಹಳ್ಳಿಯಲ್ಲಿ ಸುಮಾರು 1970ರಿಂದ ಇಂದಿನವರೆಗೆ ಸುಮಾರು 150 ಮಂದಿ ವೈದ್ಯರಾಗಿ ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ಈ ಕುರಿತು ಮಾತನಾಡಿದ ನೂಕಾ ಭಾಸ್ಕರ ರಾವ್, “ನಾನು ಕೃಷಿ ಕುಟುಂಬದಿಂದ ಬಂದವನು ಮತ್ತು ನನ್ನ ಪೋಷಕರು ಅನಕ್ಷರಸ್ಥರು. ನಮ್ಮ ಗ್ರಾಮದ ಮೊದಲ ವೈದ್ಯರಾಗಿದ್ದ ಬೆಂಡಿ ಚಂದ್ರರಾವ್ ಅವರ ಪ್ರೇರಣೆಯಿಂದ 1971ರಲ್ಲಿ ನಾನು ಎಂಬಿಬಿಎಸ್ ಮುಗಿಸಿ ವೈದ್ಯನಾದೆ. ಅಮದಾಲವಲಸದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡಿ ನಂತರ ಸರ್ಕಾರಿ ಸೇವೆಗೆ ಸೇರಿದ್ದೇನೆ. ನಾನು 2006 ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಡಾ.ಬೊಡ್ಡೆಪಾಲು ಸುರೇಶ್, “ನಮ್ಮ ಗ್ರಾಮದಲ್ಲಿ ಇಂದಿನ ಪೀಳಿಗೆಯ ಯುವಕರಿಗೆ ವೈದ್ಯನಾಗುವುದು ಗುರಿಯಾಗಿದೆ. ಬಹುಪಾಲು ಯುವಕರು ವೈದ್ಯಕೀಯ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನಮ್ಮ ಹಿರಿಯರ ಮಾರ್ಗದರ್ಶನ ಯುವಕರು ವೈದ್ಯರಾಗಲು ಸಹಕಾರಿಯಾಗಿದೆ. ಅಷ್ಟುಮಾತ್ರವಲ್ಲದೆ ಇಲ್ಲಿನ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದೇನೆ ಅಷ್ಟುಮಾತ್ರವಲ್ಲದೆ ಹಳ್ಳಿಯಿಂದ ಬರುವ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಜೊತೆಗೆ ಅವರ ಪ್ರಯಾಣ ವೆಚ್ಚವನ್ನೂ ತಾವೇ ಭರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸಮರಕ್ಕಿಳಿದ ಡಿ.ರೂಪಾ ; ಖಾಸಗಿ ಫೋಟೋಗಳ ಬಿಡುಗಡೆ