Advertisement

ಸಿಂಗಲ್ಸ್‌ಗೆ ಜೈ ಎಂದ ನಾಗಾಲ್ಯಾಂಡ್‌ ಸಚಿವ, ಪೋಸ್ಟ್‌ ಭಾರೀ ವೈರಲ್‌

07:11 PM Feb 14, 2023 | Team Udayavani |

ಪ್ರೇಮಿಗಳ ದಿನಾಚರಣೆಯಂದು ಯುವ ಜೋಡಿಗಳು ಸಂಭ್ರಮಿಸುತ್ತಿದ್ದರೆ, ಸಿಂಗಲ್ಸ್‌ ರೋಧಿಸುತ್ತಿರುವ, ಅವರನ್ನು ಕಾಲೆಳೆಯುವಂಥ ಸಾಕಷ್ಟು ಪೋಸ್ಟ್‌ಗಳನ್ನು ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ.

Advertisement

ಈ ಬಾರಿಯೂ ಅಂಥದ್ದೇ ಒಂದು ಪೋಸ್ಟ್‌ ಭಾರೀ ವೈರಲ್‌ ಆಗಿದೆ. ವಿಶೇಷವೆಂದರೆ ಆ ಪೋಸ್ಟ್‌ ಮೂಲಕ ಕಪಲ್ಸ್‌ಗಳ ಕಾಲೆಳೆದಿರುವುದು ನಾಗಾಲ್ಯಾಂಡ್‌ ಸಚಿವ ಟೆಮ್ಜನ್‌ ಇಮ್ನಾ. ಪ್ರೇಮಿಗಳ ದಿನದಂದು ತಮ್ಮದೊಂದು ಒಂಟಿ ಫೋಟೋವನ್ನು ಇಮ್ನಾ ಪೋಸ್ಟ್‌ ಮಾಡಿದ್ದಾರೆ.ಅದರಲ್ಲಿ ” ಸ್ವಾತಂತ್ರ್ಯ ಅನ್ನೋದು ಒಂದು ಉಡುಗೊರೆ! ಅದು ಎಲ್ಲರಿಗೂ ಸಿಗೋದಿಲ್ಲ. ನಾವು ನಮ್ಮ ದಿನವನ್ನು ಸಂಭ್ರಮಿಸೋಣ. ಜೈ ಸಿಂಗಲ್ಸ್‌ ಎಂದಿದ್ದಾರೆ.

ಕೆಲವೇ ಗಂಟೆಗಳಲ್ಲಿ 38 ಸಾವಿರಕ್ಕೂ ಅಧಿಕ ಮಂದಿ ಪೋಸ್ಟ್‌ ಲೈಕ್‌ ಮಾಡಿದ್ದು, ಕೆಲವರು ಒಳ್ಳೆ ಮಾತು ಹೇಳಿದ್ರಿ ಅಂದರೆ, ಮತ್ತೂ ಕೆಲವರು ಹೇಳಿಕೆಯೇನೋ ಸರಿ ಆದರೆ ಮುಖಭಾವ ಬೇರೆಯೇ ಹೇಳುತ್ತಿದೆ ಎಂದು ಕಾಲೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next