Advertisement
2 ಖೇಲ್‌ರತ್ನ, 3 ಧ್ಯಾನ್‌ಚಂದ್, 7 ದ್ರೋಣಾಚಾರ್ಯ, 17 ಅರ್ಜುನ ಪ್ರಶಸ್ತಿ ವಿಜೇತರು ಸೇರಿ ಒಟ್ಟು 29 ಮಂದಿಯ ಪಟ್ಟಿ ಹೊರಬಿದ್ದಿದೆ. ನಿರೀಕ್ಷೆಯಂತೆ ಶಿಫಾರಸು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವರೇ ಇಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅರ್ಜುನಕ್ಕೆ ಆಯ್ಕೆಯಾಗಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ಕ್ರಿಕೆಟಿಗ ಚೇತೇಶ್ವರ ಪೂಜಾರ, ಬಾಕ್ಸಿಂಗ್ ತಾರೆ ಲೈಶ್ರಾಮ್ ದೇವೇಂದೊÅ ಸಿಂಗ್, ಪ್ಯಾರಾಲಿಂಪಿಕ್ ಎತ್ತರ ಜಿಗಿತ ತಾರೆಯರಾದ ಮರಿಯಪ್ಪನ್ ತಂಗವೇಲು, ವರುಣ್ ಭಾಟಿ ಸಿಂಗ್ ಪ್ರಮುಖ ಹೆಸರುಗಳಾಗಿವೆ.
ಈ ಬಾರಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಖೇಲ್‌ರತ್ನ ಪಡೆಯುವ ಎಲ್ಲ ಅವಕಾಶವಿತ್ತು. ಆದರೆ ಇದು ತಪ್ಪಿದೆ ಎನ್ನುವುದು ವಿಷಾದದ ಸಂಗತಿ. ಬಿಸಿಸಿಐ ಆಕೆಯ ಹೆಸರನ್ನು ಖೇಲ್‌ರತ್ನಕ್ಕೆ ಶಿಫಾರಸೇ ಮಾಡದಿರುವುದು ಇದಕ್ಕೆ ಕಾರಣವೆನ್ನುವುದು ಅನಂತರ ತಿಳಿದುಬಂದ ಸಂಗತಿ. ಏಕದಿನ ಕ್ರಿಕೆಟ್‌ನಲ್ಲಿ ಹಲವು ವಿಶ್ವ ದಾಖಲೆಗಳ ಒಡತಿಯಾಗಿರುವ ಆಕೆಯ ನೇತೃತ್ವದಲ್ಲೇ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಫೈನಲ್ ಕೂಡ ತಲುಪಿದೆ ಎನ್ನುವುದು ಗಮನಿಸಬೇಕಾದ ಅಂಶ.
Related Articles
ಈ ಬಾರಿ ಅರ್ಜುನ ತಪ್ಪಿಸಿಕೊಂಡ ಪ್ರಮುಖ ಹೆಸರು ರಾಜ್ಯದ ಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ. ಇವರ ಹೆಸರನ್ನು ಮುಗಿದ ಮೇಲೆ ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಅರ್ಜುನ ತಪ್ಪಿಹೋಗಿದೆ. ಈ ಬಾರಿ ಜೂನ್ ತಿಂಗಳಲ್ಲಿ ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
Advertisement