Advertisement
“ಉದಯವಾಣಿ’ ಜತೆ ಮಾತನಾಡಿದ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಆತ್ಮವಿಶ್ವಾಸದ ನುಡಿಗಳಿವು. ಒಟ್ಟಾರೆ ಅವರು ಹೇಳಿದ್ದು:
Related Articles
Advertisement
5ನೇ ಆಯೋಗದ ಕಸುವು: ಶಿಕ್ಷಕರ ಐದನೇ ವೇತನ ಆಯೋಗಕ್ಕೆ ಖುದ್ದು ನಾನೇ ವರದಿ ತಯಾರಿಸಿದೆ. ಶಿಕ್ಷಕರ ವೇತನ ತಾರತಮ್ಯ ಕಡಿಮೆಯಾಗಬೇಕಾದರೆ ಮಧ್ಯಂತರ ಪರಿಹಾರದ ಜತೆಗೆ ವಿಶೇಷ ವೇತನ ನೀಡಬೇಕೆಂದು ಹೊಸ ಬೇಡಿಕೆ ಮಂಡಿಸಿ ವೇತನ ಆಯೋಗದಿಂದ ಶಿಕ್ಷಕರಿಗೆ ವಿಶೇಷ ವೇತನ ಮತ್ತು ಮಧ್ಯಂತರ ಪರಿಹಾರ ಕೊಡಬೇಕೆಂದು ಪ್ರಯತ್ನಿಸಿದೆ. ಮುಂದೆ 6ನೇ ವೇತನ ಆಯೋಗದ ಮುಂದೆ ವಿಶೇಷ ವೇತನ ವಿಲೀನವಾಗಬೇಕೆಂದು ಪ್ರಬಲ ವಾದ ಮಂಡಿಸಿ, ವರದಿ ಸಲ್ಲಿಸಿ ವಿಶೇಷ ವೇತನ ಮೂಲ ವೇತನದಲ್ಲಿ ವಿಲೀನಗೊಳಿಸಲು ಪಟ್ಟ ಪಾಡು ದೇವರಿಗೆ ಗೊತ್ತು. ಇದರಿಂದ ಹೆಚ್ಚುವರಿಯಾಗಿ ಒಂದು ವೇತನ ಬಡ್ತಿ ಕೋರಿದೆ. ಇದು ಸರ್ಕಾರಿ ನೌಕರರ ಪೈಕಿ ಬರೀ ಶಿಕ್ಷಕರಿಗೆ ಮಾತ್ರ ಸಿಕ್ಕಿದ್ದು ನಮ್ಮ ದೊಡ್ಡ ಹೋರಾಟದಿಂದ ಎಂಬುದನ್ನು ನಮ್ಮ ಶಿಕ್ಷಕರೆಲ್ಲರೂ ಮನಗಂಡಿದ್ದಾರೆ. ಇನ್ನು 80ರ ದಶಕದಲ್ಲಿಯೇ ವಯೋಮಿತಿ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಆದೇಶ ಮಾಡಿಸಿದೆವು. ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕರ ನೇಮಕಾತಿಗಳು ರದ್ದುಗೊಂಡಾಗ ನಿರಂತರವಾಗಿ ಎರಡು ತಿಂಗಳು ಹೋರಾಟ ಮಾಡಿ 482 ಶಿಕ್ಷಕರನ್ನು ನೇಮಕ ಮಾಡಿದ ಹೋರಾಟವೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೇ ನಡೆದಿದೆ. ಇದನ್ನು ಈ ಕ್ಷೇತ್ರದ ಶಿಕ್ಷಕ ಸಮುದಾಯ ಮರೆತಿಲ್ಲ.
ಧಾರವಾಡಕ್ಕೆ ವಿಶೇಷ ಕೊಡುಗೆ: ನಾನು ಹುಟ್ಟಿದ್ದು, ಓದಿ ಬೆಳೆದಿದ್ದು ಎಲ್ಲವೂ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ. ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷನಾದರೂ ಸ್ವಕ್ಷೇತ್ರವನ್ನು ಎಂದಿಗೂ ಮರೆಯದೇ ಕಾರ್ಯನಿರ್ವಹಿಸಿದ್ದೇನೆ. ಧಾರವಾಡ ಶಹರಕ್ಕೆ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪನೆ, ಧಾರವಾಡದ ನೌಕರರ ಭವನದಲ್ಲಿ ಸಾಂಸ್ಕೃತಿಕ ಸಮುದಾಯ ಭವನ ಹಾಗೂ ಕೊಠಡಿಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಹೀಗಾಗಿ ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕ ವೃಂದದ ಪ್ರೀತಿ ನನ್ನೊಂದಿಗಿದೆ.
ನಾನು ಶಿಕ್ಷಕರ ಸೇವಕ: ನಾನು ಶಿಕ್ಷಕರ ನಾಯಕನಲ್ಲ ಬದಲಿಗೆ ಶಿಕ್ಷಕರ ಸೇವಕ ಎಂದೇ ತಮ್ಮನ್ನು ಕರೆದುಕೊಳ್ಳುವ ಗುರಿಕಾರ ಅವರು ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ತಮ್ಮ ಕಾರ್ಯವೈಖರಿಯಿಂದಲೇ ಹೆಸರು ಮಾಡಿದ್ದಾರೆ. ಶಿಕ್ಷಕರ ರಾಷ್ಟ್ರಮಟ್ಟದ ಸಂಘಟನೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ಸಾಧನೆ ಮತ್ತು ಸೇವೆಗೆ ಹಿಡಿದ ಕನ್ನಡಿಯಾಗಿದೆ.
-ಡಾ|ಬಸವರಾಜ ಹೊಂಗಲ್