ನವದೆಹಲಿ: ಈ ಬಾರಿಯ ಬೇಸಗೆ ಕಳೆದ ವರ್ಷಕ್ಕಿಂತ ಬಿರುಸಾಗಿದೆಯೇ? ಭಾರ ತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ತಾಪಮಾನವು ಸಾಮಾನ್ಯಕ್ಕಿಂತ 1 ಡಿಗ್ರಿ ಸೆಲಿÏಯಸ್ ಹೆಚ್ಚಾಗುವ ಸಾಧ್ಯತೆಗಳು ಇವೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ಪ್ರಮಾಣ 1 ಡಿ.ಸೆ.ಗಿಂತಲೂ ಹೆಚ್ಚಾಗುವ ಭೀತಿಯಿದೆ.
ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ, ತಮಿಳುನಾಡು, ಕೇರಳ ಮತ್ತು ರಾಯಲ್‌ಸೀಮಾ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ ತಾಪಮಾನದ ಪ್ರಮಾಣ 0.5 ಡಿಗ್ರಿ ಸೆಲಿಯಸ್‌ಗಿಂತ ಕಡಿಮೆ ಇರಲಿದೆ. ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರಗಳಲ್ಲಿಯೂ ಇದೇ ತಾಪಮಾನ ಇರಲಿದೆ.
ತಾಪಮಾನ ಹೆಚ್ಚಾಗುವುದರಿಂದ ಜನರ ಆರೋಗ್ಯ ಮತ್ತು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿಂದ ಬಳಲುತ್ತಿ ರುವ ರೈತಾಪಿ ವರ್ಗದ ಜನರಿಗೆ ಈ ಸೂಚನೆ ಆಘಾತಕಾರಿಯಾಗಿ ಪರಿಣಮಿಸಲಿದೆ.
ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಈಗಾಗಲೇ ಬಿಸಿ ಗಾಳಿಯ ಎಚ್ಚರಿಕೆ ನೀಡ ಲಾಗಿದೆ. ಮುಂಬೈನಲ್ಲಿ ಬುಧವಾರ 37.4 ಡಿಗ್ರಿ ಸೆಲಿÏಯಸ್ ತಾಪಮಾನ ದಾಖಲಿಸಲಾ ಗಿತ್ತು. ನವದೆಹಲಿ, ಹರ್ಯಾಣ, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ 1.5 ಡಿಗ್ರಿ ಸೆಲಿÏಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರಗಳಲ್ಲಿ 2.3 ಡಿ.ಸೆ. ತಾಪಮಾನ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನ
ಸಾಮಾನ್ಯಕ್ಕಿಂತ 0.5 ಡಿ.ಸೆ. ಕಡಿಮೆ
ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ, ಕೇರಳ, ತಮಿಳುನಾಡು ಮತ್ತು ರಾಯಲ್‌ಸೀಮಾ.
ಸಾಮಾನ್ಯಕ್ಕಿಂತ 1ಡಿ.ಸೆ.ಗೂ ಹೆಚ್ಚು
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರ್ಯಾಣ, ಚಂಡೀಗಡ ಮತ್ತು ದೆಹಲಿ, ಹಿಮಾಚಲ ಪ್ರದೇಶ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನ, ಉತ್ತರಾಖಂಡ, ಪಶ್ಚಿಮ ಮತ್ತು ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಮತ್ತು ಪೂರ್ವ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ, ವಿದರ್ಭ, ಗುಜರಾತ್ ಮತ್ತು ಅರುಣಾಚಲ ಪ್ರದೇಶ
0.5 ರಿಂದ 1 ಡಿ.ಸೆ. ಇರುವ ಸ್ಥಳಗಳು
ದೇಶದ ಇತರೆ ಪ್ರದೇಶಗಳು