Advertisement
ಪಾಲಿಕೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ 12,800 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ. ಬಿಬಿಎಂಪಿ ಆದಾಯಕ್ಕೂ ಬಜೆಟ್‌ನಲ್ಲಿನ ವೆಚ್ಚಕ್ಕೂ ಹೋಲಿಕೆಯಾಗದಿದ್ದರೂ, ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.
Related Articles
Advertisement
ಆದರೂ, ಸಮಿತಿ ಅಧ್ಯಕ್ಷೆ ಹೇಮಲತಾ, ಬಜೆಟ್ ಗಾತ್ರವನ್ನು 12,800 ಕೋಟಿ ರೂ.ಗೆ ತಲುಪಿಸಿದರು. ಹೀಗಾಗಿ ಬಜೆಟ್ ಪರಿಶೀಲನೆ ನಡೆಸಲಿರುವ ನಗರಾಭಿವೃದ್ಧಿ ಇಲಾಖೆ, ಯಾವೆಲ್ಲ ಯೋಜನೆಗಳನ್ನು ಕಡಿತಗೊಳಿಸಬಹುದು ಎಂದು ನಿರ್ಧರಿಸಲು 1ರಿಂದ 2 ತಿಂಗಳು ಬೇಕು. ಹೀಗಾಗಿ ಸರ್ಕಾರ ಜುಲೈ ತಿಂಗಳಲ್ಲಿ ಬಜೆಟ್‌ಗೆ ಅನುಮೋದನೆ ನೀಡಿ ಬಿಬಿಎಂಪಿಗೆ ಕಳುಹಿಸುವ ಸಾಧ್ಯತೆಗಳಿವೆ.
ಪೂರ್ಣ ಅನುಷ್ಠಾನ ಕಷ್ಟ: ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ನಂತರ ಬಜೆಟ್‌ಗೆ ಅನುಮೋದನೆ ದೊರೆತರೆ ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಕೇವಲ 8 ತಿಂಗಳ ಕಾಲಾವಕಾಶ ಸಿಗಲಿದೆ. ಹೀಗಾಗಿ ಕಾರ್ಯಕ್ರಮಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಯೋಜನೆಗಳು ಕೇವಲ ಘೋಷಣೆಗೆ ಸೀಮತ ಎಂಬಂತಾಗಿವೆ.
ಕಳೆದ ಬಾರಿ ಅರ್ಧ ಅನುಷ್ಠಾನ: ಕಳೆದ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ 2018-19ನೇ ಸಾಲಿನ ಬಿಬಿಎಂಪಿ ಬಜೆಟ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿಲ್ಲ. ಬಜೆಟ್‌ನಲ್ಲಿನ ಯೋಜನೆಗಳಲ್ಲಿ ಅನುಷ್ಠಾನಗೊಳಿಸಿರುವುದು, ಚಾಲನೆ ನೀಡಿರುವ ಯೋಜನೆಗಳ ಪ್ರಮಾಣ ಶೇ.50 ಮಾತ್ರ. ಉಳಿದ ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕು.
ಬಜೆಟ್ ಅನುಷ್ಠಾನದ ವಿವರ (ಕೋಟಿ ರೂ.ಗಳಲ್ಲಿ)ವರ್ಷ ಆಯವ್ಯಯ ಗಾತ್ರ ಅನುಷ್ಠಾನ ಮೊತ್ತ
2010-11 8862.04 3626.18
2011-12 9398.54 3838.99
2012-13 9920.35 4358.05
2013-14 8497.48 3343.39
2014-15 6024.52 3777.80
2015-16 5409.68 5197.93
2016-17 9353.10 5309.61
2017-18 9994.54 7513.53 ಬಿಬಿಎಂಪಿ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಬಳಕೆಗೆ ಸರ್ಕಾರ ಅನುಮೋದನೆ ನೀಡಲಿದೆ. ಉಳಿದಂತೆ ನೀತಿ ಸಂಹಿತೆ ಮುಗಿದ ಕೂಡಲೇ ಬಜೆಟ್‌ನ ಶೀಘ್ರ ಅನುಷ್ಠಾನ ಕುರಿತು ಮೇಯರ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ