Advertisement
ಟ್ಯಾಂಕರ್ ನೀರು ಗತಿ ಕೋಟೆ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೈಲ್, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್, ಕಿನ್ನಿಗುಡ್ಡೆ, ಕೋಟೆಬೈಲು, ಕಂಡಿಗೆ, ಪರೆಂಕುದ್ರು ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದೆ. ಕಳೆದ ವರ್ಷವೂ ಇಲ್ಲಿ ನೀರಿಗೆ ಹಾಹಾಕಾರವಿದ್ದು ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗಿತ್ತು. 4 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್‌ನಲ್ಲಿ 15 ಬಾರಿ ನೀರು ಪೂರೈಸಲಾಗುತ್ತಿತ್ತು. ಈ ಬಾರಿ ನೀರಿಗೆ ಮತ್ತಷ್ಟು ಬೇಡಿಕೆ ಹೆಚ್ಚಿದೆ. ಶೇ. 70ರಷ್ಟು ಕರಾವಳಿ ತೀರ ಹೊಂದಿರುವ ಮಟ್ಟುವಿನಲ್ಲೂ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ನೀರು ಅಗತ್ಯವಾಗಿದೆ.
ಕೋಟೆಯಲ್ಲಿ ಒಟ್ಟು 6 ಸರಕಾರಿ ಬಾವಿಗಳು ಇವೆೆ. 4 ಕೊಳವೆ ಬಾವಿ, 4 ಹ್ಯಾಂಡ್‌ಪಂಪ್‌ಗ್ಳಿವೆ. ಆದರೆ ವಿಶೇಷವಾಗಿ ಬಾವಿಗಳ ನೀರು ಕೆಂಪುಬಣ್ಣದ್ದಾಗಿದ್ದು, ತೀವ್ರ ಲವಣಾಂಶ ಹೊಂದಿದೆ. ಕಟಪಾಡಿಯಲ್ಲಿ 5 ಸರಕಾರಿ ತೆರೆದ ಬಾವಿಗಳು, 5 ಬೋರ್‌ವೆಲ್‌ಗಳಿವೆ. ಆದರೆ ಉಪ್ಪು ನೀರಿನ ಸಮಸ್ಯೆಯಿಂದಾಗಿ ಇಲ್ಲಿ ನೀರಿನ ಕೊರತೆ ಹೆಚ್ಚಾಗಿ ಬಾಧಿಸಿದೆ.
Related Articles
ಕೋಟೆ, ಕಟಪಾಡಿಗಳಲ್ಲಿ ಮಾರ್ಚ್ ಅನಂತರ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ತಲೆದೋರುತ್ತದೆ. ನೀರಿನ ಕುರಿತು ಕೆಲವೊಂದು ಯೋಜನೆ ಹಾಕಿಕೊಂಡಿದ್ದರೂ ಇಲ್ಲಿ ಶಾಶ್ವತ ಯೋಜನೆಗಳ ಬೇಡಿಕೆ ಇದೆ. ಬೇಸಗೆ ನೀರು ಸರಬರಾಜಿಗೆ ಕೋಟೆ ಗ್ರಾಮದಲ್ಲಿ 2015-16ನೇ ಸಾಲಿನಲ್ಲಿ 1.65 ಲಕ್ಷ ರೂ., 2016-17ರಲ್ಲಿ 3.68 ಲಕ್ಷ ರೂ. 2017-18ರಲ್ಲಿ 10,31,078 ರೂ. ಅನುದಾನಕ್ಕೆ ಸಿದ್ಧವಾಗಿದೆ. ಹಾಗೆಯೇ ಕಟಪಾಡಿಯಲ್ಲಿ 2014-15ನೇ ಸಾಲಿನಲ್ಲಿ 1.14 ಲಕ್ಷ ರೂ. ,2015-16ರ ಸಾಲಿನಲ್ಲಿ 2.67 ಲಕ್ಷ ರೂ. 2016-2017ರಲ್ಲಿ 3.34 ಲಕ್ಷ ರೂ., 2017-18ರಲ್ಲಿ 3.97 ಲಕ್ಷ ರೂ. ಬಳಸಿಕೊಳ್ಳಲಾಗುತ್ತಿದೆ.
Advertisement
ಕೆಂಪು ನೀರು ಕುಡಿಯೋದೇಗೆ? ಉದ್ಯಾವರ ಮತ್ತು ಮಣಿಪುರ ಗ್ರಾ.ಪಂ.ಗಳಲ್ಲಿ ಕೆಂಪು ಮಿಶ್ರಿತ ಒಗರು ನೀರು ಲಭ್ಯವಾಗುತ್ತಿದೆ. ಉದ್ಯಾವರ ಗ್ರಾ.ಪಂ.ನಲ್ಲಿ ಮನೆ ಬಳಕೆ ಇದೇ ನೀರನ್ನು ಬಳಸುತ್ತಿದ್ದರೂ ಕುಡಿಯಲು ಪಂಚಾಯತ್ ನೀರು ಅವಲಂಬಿಸಬೇಕಾಗಿದೆ. ಸದ್ಯ ನೀರು ಪೂರೈಕೆಗೆ ಸಮಸ್ಯೆ ಇಲ್ಲ. ಆದರೆ ತೀವ್ರ ಬೇಸಗೆಯಲ್ಲಿ 3 ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತದೆ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಣಿಪುರ ಗ್ರಾ.ಪಂ.ನಲ್ಲಿ ಶುದ್ಧೀಕರಣ ಘಟಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಹುಗ್ರಾಮ ಯೋಜನೆ ಅನುಷ್ಠಾನ ಅಗತ್ಯ
ಹೆಚ್ಚಿನ ಕಡೆ ಉಪ್ಪು ನೀರಿನ ಪ್ರದೇಶವಿದೆ. ಇಲ್ಲಿನ ನೀರಿನ ಮೂಲಗಳು ಮಾರ್ಚ್ ವೇಳೆಗೆ ಬತ್ತುತ್ತವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದರೆ ಬವಣೆಗೆ ಪರಿಹಾರ ಸಿಗುತ್ತದೆ.
-ಸುರೇಖಾ, ಪಿಡಿಒ ಕೋಟೆ ಗ್ರಾ.ಪಂ. ಕೆಲವೆಡೆ ಖಾಸಗಿ ಬಾವಿಗಳ ಬಳಕೆ
ತೋಡಿದ 1 ಬಾವಿಯಲ್ಲಿ ನೀರು ಸಿಕ್ಕಿಲ್ಲ. ಮತ್ತೂಂದು ಬಾವಿ ಬತ್ತಿ ಹೋಗಿದ್ದು, ಪೇಟೆಯಲ್ಲಿನ ಓವರ್ ಹೆಡ್‌ಟ್ಯಾಂಕ್ ಕೂಡಾ ಖಾಲಿ ಇರಿಸುವಂತಾಗಿದೆ. ಕೆಲವೆಡೆ ಖಾಸಗಿ ಬಾವಿಗಳ ನೀರನ್ನು ಬಳಸಲಾಗುತ್ತಿದೆ. ಹೆದ್ದಾರಿ ನಿರ್ಮಾಣದ ಸಂದರ್ಭವೂ ಪೈಪ್‌ಲೆ„ನ್ ಹಾಳಾಗಿದೆ.
– ಇನಾಯತುಲ್ಲಾ ಬೇಗ್, ಪಿಡಿಒ ಕಟಪಾಡಿ ಗ್ರಾ.ಪಂ. ವಿಜಯ ಆಚಾರ್ಯ, ಉಚ್ಚಿ