Advertisement
ಕೋಲಾರ ಕ್ಷೇತ್ರವನ್ನು ಹಾಲಿ ಪ್ರತಿನಿಧಿಸುತ್ತಿರುವ ಶ್ರೀನಿವಾಸ್ ಗೌಡ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಗೆ ಕೈ ಕೊಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲೇ ಅವರು ಕಾಂಗ್ರೆಸ್ ಕಡೆ ವಾಲಿದ್ದರು. ಬೇರೆ ಬೇರೆ ಲೆಕ್ಕಾಚಾರ ಆಧರಿಸಿ ಅವರು ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಈಗ ಸಿದ್ದರಾಗಿದ್ದಾರೆ.
Related Articles
Advertisement
ಸಿದ್ದರಾಮಯ್ಯ ಈ ಕ್ಷೇತ್ರವನ್ನೇ ಆಯ್ದುಕೊಳ್ಖುವುದಕ್ಕೆ ಮುಖ್ಯ ಕಾರಣ, ಕಾಂಗ್ರೆಸಿಗರು ನೀಡುವ ಒಳ ಏಟನ್ನು ತಪ್ಪಿಸಿಕೊಳ್ಳುವುದು. ಕಾಂಗ್ರೆಸಿನ ಒಂದು ವರ್ಗ ತಮ್ಮನ್ನು ಸೋಲಿಸಬಹುದೆಂಬ ಭಯ ಅವರನ್ನು ಇತ್ತೀಚೆಗೆ ಕಾಡುತ್ತಿದೆ. ಆದರೆ ರಮೇಶ್ ಕುಮಾರ್ ಬಣ ಗಟ್ಟಿಯಾಗಿ ನಿಲ್ಲುವುದರಿಂದ ಆ ಅಪಾಯದ ಸಾಧ್ಯತೆ ಕಡಿಮೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿ ಇಲ್ಲ. ಇದು ಇನ್ನೊಂದು ಪ್ಲಸ್ ಪಾಯಿಂಟ್ ಎಂದು ಹೇಳಲಾಗುತ್ತಿದೆ.