ಮಿಜೋರಾಂ: ಮಿಜೋರಾಂ ರಾಜ್ಯ ಭಾರತದಲ್ಲಿ ಅತೀ ಹೆಚ್ಚು ಸಂತೋಷ ಭರಿತ ರಾಜ್ಯವೆಂದು ಸಮೀಕ್ಷೆಯೊಂದು ತಿಳಿಸಿದೆ. ಗುರುಗ್ರಾಮ್ ನ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಇನ್ಸ್ ಟಿಟ್ಯೂಟ್ ನ ಪ್ರೊ.ರಾಜೇಶ್ ಕೆ.ಪಿಲ್ಲಾನಿಯಾ ಕೈಗೊಂಡ ಅಧ್ಯಯನದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ.
ಇದನ್ನೂ ಓದಿ:JDS ಮೂರನೇ ಪಟ್ಟಿ: 7 ಕಡೆ ಬಾಹ್ಯ ಬೆಂಬಲ, 13 ಅಭ್ಯರ್ಥಿಗಳ ಬದಲಾವಣೆ
ಮಿಜೋರಾಂ ಶೇ.100ರಷ್ಟು ಸಾಕ್ಷರತೆ ಸಾಧಿಸಿದ ಭಾರತದ ಎರಡನೇ ರಾಜ್ಯವಾಗಿದೆ. ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ವಿದ್ಯಾರ್ಥಿಗಳ ಬೆಳವಣಿಗೆಗೆ ಅವಕಾಶ ನೀಡಲಾಗುತ್ತದೆ.
ಮಿಜೋರಾಂನ ಸಂತೋಷ ಭರಿತ ಸೂಚ್ಯಂಕವು ಆರು ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕೌಟುಂಬಿಕ ಸಂಬಂಧಗಳು, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ದಾನ-ಧರ್ಮ, ಕೋವಿಡ್ 19 ನಂತರದ ಬದಲಾವಣೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಷಯವನ್ನೊಳಗೊಂಡಿರುವುದಾಗಿ ವರದಿ ತಿಳಿಸಿದೆ.
ನಮ್ಮ ಶಿಕ್ಷಕರೇ ನಮ್ಮ ಉತ್ತಮವಾದ ಗೆಳೆಯರಾಗಿದ್ದಾರೆ. ನಾವು ಭಯಪಡುವ ಪ್ರಸಂಗ ಇಲ್ಲ. ಬಹುತೇಕ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇವೆ ಎಂದು ಸಮೀಕ್ಷೆಯ ವೇಳೆ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.
ಈ ಎಲ್ಲಾ ಅಂಶಗಳ ಆಧಾರದ ಮೇಲೆ ಮಿಜೋರಾಂ ದೇಶದಲ್ಲಿಯೇ ಅತ್ಯಂತ ಸಂತೋಷ ಭರಿತ ರಾಜ್ಯವಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿರುವುದಾಗಿ ಪ್ರೊ.ಪಿಲ್ಲಾನಿಯಾ ತಿಳಿಸಿದ್ದಾರೆ.