Advertisement

ಮೂಟೆ ಹೊತ್ತ ಅಧಿಕಾರಿ

06:00 AM Sep 07, 2018 | |

ತಿರುವನಂತಪುರಂ: ದಾದ್ರಾ ಮತ್ತು ನಗರ್‌ಹವೇಲಿಯಲ್ಲಿ ಜಿಲ್ಲಾಧಿಕಾರಿಯಾಗಿರುವ 2012ರ ಬ್ಯಾಚ್‌ ಐಎಎಸ್‌ ಅಧಿಕಾರಿಯೊಬ್ಬರು ತಮ್ಮ ಗುರುತನ್ನೇ ನೀಡದೇ ಕೇರಳದ ನಿರಾಶ್ರಿತ ಶಿಬಿರದಲ್ಲಿ ಎಂಟು ದಿನಗಳ ಕಾಲ ಮೂಟೆ ಹೊರುವ ಕೆಲಸ ಮಾಡಿದ್ದು ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಕಣ್ಣನ್‌ ಗೋಪಿನಾಥನ್‌ ಆಗಸ್ಟ್‌ 26 ರಂದು ಕೇರಳಕ್ಕೆ ಆಗಮಿಸಿದ್ದರು. ಕೊಚ್ಚಿ ಬಂದರಿನಲ್ಲಿ ಪರಿಹಾರ ಸಾಮಗ್ರಿಗಳನ್ನು ಇಳಿಸಿಕೊಂಡು, ಪ್ಯಾಕೇಜ್‌ಗಳನ್ನು ತಲೆ ಮೇಲೆ ಹೊತ್ತು ಸಾಗಿಸಿದ್ದಾರೆ. ಒಂಬತ್ತನೇ ದಿನ ಇವರು ಐಎಎಸ್‌ ಅಧಿಕಾರಿ ಎಂಬುದು ತಿಳಿದು ಬಂದಿದೆ. ಆಗ ಅಲ್ಲಿಂದ ಸದ್ದೇ ಇಲ್ಲದೆ ನಾಪತ್ತೆಯಾಗಿದ್ದಾರೆ.

Advertisement

ಇವರು ಆಗಸ್ಟ್‌ 26 ರಂದು ದಾದ್ರಾ, ನಗರ ಹವೇಲಿ ಪರವಾಗಿ 1 ಕೋಟಿ ರೂ. ಪರಿಹಾರ ನಿಧಿ ಚೆಕ್‌ ನೀಡಲು ಕೇರಳಕ್ಕೆ ಆಗಮಿಸಿದ್ದರು. ಚೆಕ್‌ ಹಸ್ತಾಂತರ ಕೆಲಸ ಮುಗಿದ ನಂತರ ಅವರು ತಿರುವನಂತಪುರಂಗೆ ಬಸ್‌ ಹತ್ತಿದ್ದರು. ಅಲ್ಲಿಂದ ಅವರ ಸ್ವಗ್ರಾಮ ಪುತುಪಲ್ಲಿಗೆ ತೆರಳುವುದರ ಬದಲಿಗೆ, ಕೇರಳದಲ್ಲಿ ಅತ್ಯಂತ ವಿಪರೀತವಾಗಿ ಪ್ರವಾಹ ಪೀಡಿತ ಪ್ರದೇಶವಾದ ಚೆಂಗನೂರಿಗೆ ತೆರಳಿದ್ದಾರೆ. ಅಲ್ಲಿ ನಿರಾಶ್ರಿತರಿಗೆ ಸಹಾಯವನ್ನೂ ಮಾಡಿದ್ದಾರೆ. ನಾನೇನೂ ಅದ್ಭುತವಾದದ್ದನ್ನು ಮಾಡಿಲ್ಲ. ಕೇವಲ ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಗೋಪಿನಾಥನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next