Advertisement

ಇದು ನಿಮ್ಮ ರಂಗಿತರಂಗ: ಅನೂಪ್

07:25 AM Jul 05, 2020 | Lakshmi GovindaRaj |

ರಂಗಿತರಂಗ ಚಿತ್ರ ನಿರ್ದೇಶಕ ಅನೂಪ್ ಭಂಡಾರಿ ಸದ್ಯ ಮೊದಲ ಬಾರಿಗೆ ಸುದೀಪ್ ಜೊತೆ ಫಾಂಟಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Advertisement

“5 ವರ್ಷಗಳ ಹಿಂದೆ ಇದೇ ದಿನ ನಮ್ಮ ರಂಗಿತರಂಗ ನಿಮ್ಮ ರಂಗಿತರಂಗ ಆಗಿತ್ತು, ರಂಗಿತರಂಗವನ್ನು ಯಶಸ್ಸುಗೊಳಿಸಿದ ನಿಮಗೆಲ್ಲರಿಗೂ ವಿಶೇಷ ಧನ್ಯವಾದಗಳುʼ ಎಂದು ನಿರ್ದೇಶಕ ಅನೂಪ್ ಭಂಡಾರಿ‌ ಟ್ವೀಟರ್‌ನಲ್ಲಿ ಒಂದು ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿ ಕನ್ನಡದ ಜನತೆಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ.

ಇನ್ನು ರಂಗಿತರಂಗ ಚಿತ್ರ ಬಿಡುಗಡೆಯಾದಾಗ ಅಷ್ಟೇನು ಪ್ರಚಾರ ಸಿಕ್ಕಿರಲಿಲ್ಲ, ಅನಂತರ ಸಿನಿಪ್ರೇಮಿಗಳು ಚಿತ್ರವನ್ನು ಮೆಚ್ಚಿ ಅವರೇ ಪ್ರಚಾರವನ್ನು ಮಾಡಿ ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಹೋಗುವಂತೆ ಮಾಡಿದ್ದರು. ಅಲ್ಲದೇ ಬಹುತೇಕ ಚಿತ್ರದಲ್ಲಿ ನಾಯಕ, ನಾಯಕಿ ಸೇರಿದಂತೆ ಎಲ್ಲರೂ ಹೊಸಬರಾಗಿದ್ದು, ಸಂಗೀತ, ಛಾಯಾಗ್ರಹಣ, ತಂತ್ರಜ್ಞಾನ ಸೇರಿದಂತೆ ಹಾಡುಗಳು ಚಿತ್ರದಲ್ಲಿ ಹೈಲೈಟ್  ಆಗಿತ್ತು. ಅಲ್ಲದೇ ಚಿತ್ರವು ಕರ್ನಾಟಕದಲ್ಲದೇ, ಹೊರರಾಜ್ಯ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಯುಎಇಗಳಲ್ಲಿ ಬಿಡುಗಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next