ನವದೆಹಲಿ: ಒಂದು ಅನನಾಸಿನ ಬೆಲೆ ಎಷ್ಟಿರಬಹುದು? 46 ರೂ., ಹೆಚ್ಚೆಂದರೆ 50 ರೂ. ಆದರೆ, ಹರಾಜಿನಲ್ಲಿ ಮಾರಾಟವಾಗಿರುವ ಈ ಅನನಾಸಿನ ಬೆಲೆ ಬರೋಬ್ಬರಿ 1 ಲಕ್ಷ ರೂ. ದ ಹೆಲಿಗನ್ ಎಂಬ ವೆಬ್‌ಸೈಟ್ ಮೂಲಕ ಅದನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.
ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿ ಪ್ರಕಾರ, 1819ರಲ್ಲಿ ಇಂಗ್ಲೆಂಡ್‌ಗೆ ಅನಾನಸ್ ಅನ್ನು ಪರಿಚಯಿಸಲಾಯಿತು.
ದೇಶದ ಹವಾಮಾನ ಅದರ ಬೆಳೆಗೆ ಸೂಕ್ತವಲ್ಲ ಎಂದು ತೋಟಗಾರಿಕೆ ಇಲಾಖೆಯ ಪರಿಣತರು ಅಭಿಪ್ರಾಯಪಟ್ಟಿದ್ದರು.
ಹೀಗಾಗಿ, ಮರದಿಂದ ತಯಾರಿಸಿದ ಪೆಟ್ಟಿಗೆಯಲ್ಲಿ ರಸಗೊಬ್ಬರ ಮಿಶ್ರಿತ ಮಣ್ಣನ್ನು ತುಂಬಿ ಅದರಲ್ಲಿ ಬೆಳೆಯಲು ಆರಂಭಿಸಲಾಯಿತು. ಇಷ್ಟು ಕಷ್ಟಪಟ್ಟು ಬೆಳೆಯುವ ಕಾರಣ, ಒಂದೊಂದು ಅನನಾಸು ಕೂಡ ತಲಾ 1 ಲಕ್ಷ ರೂ.ಗೆ ಮಾರಾಟವಾಗುತ್ತದೆ.
ಇಂಗ್ಲೆಂಡ್‌ನ ಕ್ರೋನ್‌ವಾಲ್ ಎಂಬಲ್ಲಿ ದ ಹಲಿಗನ್ ಎಂಬ ಹೆಸರಿನ ಉದ್ಯಾನವೂ ಇದೆ. ರಾಣಿ 2ನೇ ಎಲಿಜಬೆತ್‌ಗೆ ಅಲ್ಲಿ ಬೆಳೆದಿದ್ದ 2ನೇ ಹಣ್ಣನ್ನು ಉಡುಗೊರೆಯಾಗಿ ನೀಡಲಾಗಿತ್ತು.